ADVERTISEMENT

ಅಟ್‌ವುಡ್‌, ಎವಾರಿಸ್ಟೊ ಮುಡಿಗೆ ಬುಕರ್‌ ಪ್ರಶಸ್ತಿ

ನಿಯಮ ಮುರಿದ ನಿರ್ಣಾಯಕರು: ಇಬ್ಬರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:01 IST
Last Updated 15 ಅಕ್ಟೋಬರ್ 2019, 19:01 IST
ಬುಕರ್‌ ಪ್ರಶಸ್ತಿ ಪುರಸ್ಕೃತ ಮಾರ್ಗರೆಟ್‌ ಅಟ್‌ವುಡ್‌ ಹಾಗೂ ಬರ್ನಾರ್ಡಿನ್‌ ಎವಾರಿಸ್ಟೊ
ಬುಕರ್‌ ಪ್ರಶಸ್ತಿ ಪುರಸ್ಕೃತ ಮಾರ್ಗರೆಟ್‌ ಅಟ್‌ವುಡ್‌ ಹಾಗೂ ಬರ್ನಾರ್ಡಿನ್‌ ಎವಾರಿಸ್ಟೊ   

ಲಂಡನ್: ಕೆನಡಾ ಮೂಲದ ಲೇಖಕಿ ಮಾರ್ಗರೆಟ್‌ ಅಟ್‌ವುಡ್‌ ಹಾಗೂ ಬ್ರಿಟನ್‌ ಸಾಹಿತಿ ಬರ್ನಾಡಿನ್‌ ಎವಾರಿಸ್ಟೊ ಪ್ರಸಕ್ತ ಸಾಲಿನ ಬುಕರ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತ ಮೂಲದ ಬ್ರಿಟಿಷ್‌ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ಅಟ್‌ವುಡ್‌ (79) ಈ ಪ್ರಶಸ್ತಿಗೆ ಭಾಜನರಾದ ಅತ್ಯಂತ ಹಿರಿಯ ಸಾಹಿತಿಯಾಗಿದ್ದರೆ, ಎವಾರಿಸ್ಟೊ ಈ ಪ್ರಶಸ್ತಿ ಪಡೆದ ಮೊದಲ ಕಪ್ಪುಮಹಿಳೆಯಾಗಿದ್ದಾರೆ.

1992ರ ನಂತರ, ಇದೇ ಮೊದಲ ಬಾರಿಗೆ ನಿರ್ಣಾಯಕರುಪ್ರಶಸ್ತಿಯನ್ನು ಒಬ್ಬರಿಗೇ ನೀಡಬೇಕು ಎಂಬ ನಿಯಮ ಮುರಿದಿದ್ದಾರೆ. ಅಟ್‌ವುಡ್‌ ಅವರು ‘ದ ಟೆಸ್ಟ್‌ಮೆಂಟ್‌’ ಮತ್ತುಎವಾರಿಸ್ಟೊ ಅವರ ‘ಗರ್ಲ್‌, ವುಮನ್‌, ಅದರ್‌’ ಕೃತಿಗೆ ಪ್ರಶಸ್ತಿ ನೀಡಲಾಗಿದೆ.

ADVERTISEMENT

‘ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ನಿಯಮಗಳನ್ನು ಗಾಳಿಗೆ ತೂರಬೇಕು ಎಂಬುದೇ ನಮ್ಮ ನಿರ್ಧಾರ ವಾಗಿತ್ತು’ ಎಂದು ಐವರು ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿ ಅಧ್ಯಕ್ಷ ಪೀಟರ್‌ ಫ್ಲಾರೆನ್ಸ್‌ ಹೇಳಿದ್ದಾರೆ.

‘ಇಬ್ಬರೂ ಪ್ರಶಸ್ತಿಗೆ ಅರ್ಹರು. ಪ್ರಶಸ್ತಿಯ ಮೊತ್ತ 50 ಸಾವಿರ ಪೌಂಡ್‌ಗಳನ್ನು (₹ 45.30 ಲಕ್ಷ) ಇಬ್ಬರ ನಡುವೆ ಹಂಚಬೇಕು ಎಂಬುದು ಸಹ ನಮ್ಮ ದೃಢ ನಿಲುವಾಗಿತ್ತು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.