ADVERTISEMENT

ಭಾರತ ವಿರೋಧಿ ಶಕ್ತಿಗಳಿಗೆ ಕಡಿವಾಣಕ್ಕೆ ಮೋದಿ–ಜಾನ್ಸನ್‌ ಒಪ್ಪಿಗೆ

ಗ್ಲಾಸ್ಗೋ ಶೃಂಗಸಭೆ: ವಿದೇಶಾಂಗ ಕಾರ್ಯದರ್ಶಿ ಶೃಂಗ್ಲಾ ಹೇಳಿಕೆ

ಪಿಟಿಐ
Published 2 ನವೆಂಬರ್ 2021, 5:18 IST
Last Updated 2 ನವೆಂಬರ್ 2021, 5:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ಲಾಸ್ಗೋ: ‘ಭಾರತ ವಿರೋಧಿ ತೀವ್ರಗಾಮಿ ಗುಂಪುಗಳ ಹಾಗೂ ಕೆಲವು ಪ್ರತ್ಯೇಕತಾವಾದಿ ಗುಂಪುಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸಮ್ಮತಿಸಿದರು’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದರು.

ಹವಾಮಾನ ಬದಲಾವಣೆ ಕುರಿತು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಶೃಂಗಸಭೆ ಸಂದರ್ಭದಲ್ಲಿ ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ ವಿರೋಧಿ ಪ್ರತ್ಯೇಕತಾ ಗುಂಪುಗಳಿಂದ ಬ್ರಿಟನ್‌ನಲ್ಲಿ ಖಾಲಿಸ್ತಾನ ಪರ ಚಟುವಟಿಕೆಗಳು ನಡೆಯುತ್ತಿವೆ. ಮೋದಿ–ಜಾನ್ಸನ್‌ ನಡುವಿನ ಮಾತುಕತೆ ವೇಳೆ ಈ ವಿಷಯವೂ ಪ್ರಸ್ತಾಪವಾಯಿತೆ’ ಎಂಬ ಪ್ರಶ್ನೆಗೆ, ‘ಉಭಯ ನಾಯಕರ ನಡುವಿನ ಮಾತುಕತೆ ಅಲ್ಪಸಮಯದ್ಧಾಗಿತ್ತು. ಎರಡೂ ದೇಶಗಳು ಮೂಲಭೂತವಾದ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಬಗ್ಗೆ ಚರ್ಚೆ ನಡೆಯಿತು’ ಎಂದು ಶೃಂಗ್ಲಾ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.