ADVERTISEMENT

ಭಾರತಕ್ಕೆ ಸುಂಕ ಹೇರಲು ನೆಪ ಹುಡುಕುತ್ತಿರುವ ಟ್ರಂಪ್: ಬ್ರಾಡ್‌ ಶೆರ್ಮನ್‌ ಆರೋಪ

ಪಿಟಿಐ
Published 19 ಫೆಬ್ರುವರಿ 2026, 15:46 IST
Last Updated 19 ಫೆಬ್ರುವರಿ 2026, 15:46 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ‍ಫೇಸ್‌ಬುಕ್ ಚಿತ್ರ

ನ್ಯೂಯಾರ್ಕ್‌: ‘ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ‘ಪ್ರತೀಕಾರದ ಸುಂಕ’ ವಿಧಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೆಪಗಳನ್ನು ಹುಡುಕುತ್ತಿದ್ದಾರೆ’ ಎಂದು ಅಲ್ಲಿನ ಸಂಸದ ಬ್ರಾಡ್‌ ಶೆರ್ಮನ್‌ ಹೇಳಿದ್ದಾರೆ. 

ADVERTISEMENT

ಶೆರ್ಮನ್‌ ಅವರು ವಿದೇಶಾಂಗ ವ್ಯವಹಾರಗಳ ಸದನ ಸಮಿತಿ ಹಾಗೂ ಹಣಕಾಸು ಸಮಿತಿಯ ಸದಸ್ಯರೂ ಆಗಿದ್ದು, ‘ಟ್ರಂಪ್‌ ಅವರು ಭಾರತದ ವಿರುದ್ಧ ಅನುಸರಿಸುತ್ತಿರುವ ‘ಕೆಡುಕಿನ ಸುಂಕ ನೀತಿ’ಯನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. 

ಒಟ್ಟು ಬೇಡಿಕೆಯಲ್ಲಿ ಶೇ 90ರಷ್ಟು ಕಚ್ಚಾ ತೈಲವನ್ನು ಹಂಗೇರಿ,  ರಷ್ಯಾದಿಂದ ಖರೀದಿಸುತ್ತಿದೆ. ಚೀನಾ ಕೂಡ ರಷ್ಯಾದ ಅತಿದೊಡ್ಡ ತೈಲ ಖರೀದಿದಾರ ದೇಶವಾಗಿದೆ. ಭಾರತ ರಷ್ಯಾದಿಂದ ಖರೀದಿಸುತ್ತಿರುವುದು ಶೇ 21ರಷ್ಟು ತೈಲ ಮಾತ್ರ. ಆದರೆ, ಹೆಚ್ಚಿನ ನಿರ್ಬಂಧವನ್ನು ಅಮೆರಿಕ ಭಾರತದ ಮೇಲೆ ಹೇರಿದೆ ಎಂದು ಅವರು ಹೇಳಿದ್ದಾರೆ. 

ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಚೌಕಟ್ಟು ರೂಪುಗೊಂಡ ಬೆನ್ನಲ್ಲೇ, ಟ್ರಂಪ್‌ ಅವರು ಭಾರತದ ಮೇಲೆ ಹೇರಿದ್ದ ಹೆಚ್ಚುವರಿ ಸುಂಕವನ್ನು ಶೇ 25ರಷ್ಟು ಕಡಿತ ಮಾಡಿದ್ದರು. ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಒತ್ತಡ ಹೇರಿ, ದಂಡದ ರೂಪದಲ್ಲಿ ಈ ಸುಂಕವನ್ನು ಹೇರಲಾಗಿತ್ತು.  

ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡ  ನಂತರ ಸುಂಕ ದರವು ಈಗಿನ ಶೇ 25ರಿಂದ ಶೇ 18ಕ್ಕೆ ತಗ್ಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.