ADVERTISEMENT

ಬ್ರೆಜಿಲ್‌: ಕೊರೊನಾ ಲಸಿಕೆ ಅಂತಿಮ ಪರೀಕ್ಷೆಗೆ ಅನುಮೋದನೆ

ನಾಲ್ಕನೇ ಲಸಿಕೆ ಅಧ್ಯಯನಕ್ಕೂ ಸಮ್ಮತಿ

ಏಜೆನ್ಸೀಸ್
Published 19 ಆಗಸ್ಟ್ 2020, 6:15 IST
Last Updated 19 ಆಗಸ್ಟ್ 2020, 6:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಿಯೊ ಡಿ ಜನೈರೊ:'ಜಾನ್ಸನ್‌ ಅಂಡ್ ಜಾನ್ಸನ್ ಕಂಪನಿ‌ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ನೀಡಿದ್ದು, ನಾಲ್ಕನೇ ಹಂತದ ಮತ್ತೊಂದು ಲಸಿಕೆ ಅಧ್ಯಯನಕ್ಕೂ ಸಮ್ಮತಿ ಸೂಚಿಸಿದೆ’ ಎಂದು ಬ್ರೆಜಿಲ್ ಆರೋಗ್ಯ ಇಲಾಖೆಯ ನಿಯಂತ್ರಕರು ತಿಳಿಸಿದ್ದಾರೆ.

ಅಮೆರಿಕದ ಫಾರ್ಮಸುಟಿಕಲ್ ಕಂಪನಿಯ ಅಂಗಸಂಸ್ಥೆಯಾದ ಜಾನ್ಸನ್‌ ಕಂಪನಿ, ಈ ಪ್ರಾಯೋಗಿಕ ಲಸಿಕೆಯನ್ನು ಬ್ರೆಜಿಲ್‌ನ ಏಳು ರಾಜ್ಯಗಳ 7 ಸಾವಿರ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಸಿದೆ. ಅಷ್ಟೇ ಅಲ್ಲ, ವಿಶ್ವದಾದ್ಯಂತ 60 ಸಾವಿರ ವ್ಯಕ್ತಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದೆ’ ಎಂದು ಬ್ರೆಜಿಲ್‌ನ ಆರೋಗ್ಯ ಇಲಾಖೆ ನಿಯಂತ್ರಣಾಧಿಕಾರಿ ಅನ್ವಿಸಾ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಅನುಮೋದನೆಗೆ ಕಳುಹಿಸುವ ಮುನ್ನ ಲಸಿಕೆಯನ್ನುರ‍್ಯಾಂಡಮ್ ಟೆಸ್ಟ್‌, ನಿಯಂತ್ರಿತ ಮತ್ತು ಡಬಲ್–ಬ್ಲೈಂಡ್‌ ಎಂಬ ಮೂರು ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ನೋಡಲಾಗಿದೆ.

ADVERTISEMENT

'ಕೊರೊನಾ ಸೋಂಕಿನ ವಿರುದ್ಧ ಅಭಿವೃದ್ದಿಪಡಿಸಿ, ಪ್ರಯೋಗಕ್ಕೆ ಒಳಪಡಿಸಿರುವ ಮತ್ತೊಂದು ಲಸಿಕೆಯ ಅಧ್ಯಯನಕ್ಕೂ ಬ್ರೆಜಿಲ್ ಅನುಮೋದನೆ ನೀಡಿದೆ. ಇದೊಂದು ಮಹತ್ವದ ಬೆಳವಣಿಗೆ ಎಂದು ಅವರು ಅನ್ವಿಸಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.