ADVERTISEMENT

ಬ್ರೆಜಿಲ್‌: ಭೀಕರ ಮಳೆ, ಪ್ರವಾಹದಿಂದ ಸಂಭವಿಸಿದ ಭೂ ಕುಸಿತಕ್ಕೆ 94 ಜನ ಸಾವು

ಏಜೆನ್ಸೀಸ್
Published 17 ಫೆಬ್ರುವರಿ 2022, 15:13 IST
Last Updated 17 ಫೆಬ್ರುವರಿ 2022, 15:13 IST
ಬ್ರೆಜಿಲ್‌ ಪೆಟ್ರೋಪೊಲಿಸ್‌ ನಗರದಲ್ಲಿ ಭೂ ಕುಸಿತದಿಂದ ಕೆಸರಿನಲ್ಲಿ ಸಿಲುಕಿರುವ ಮೃತ ದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಲ್ಲಿನ ಸಿಬ್ಬಂದಿ–ಎಪಿ/ಪಿಟಿಐ ಚಿತ್ರ
ಬ್ರೆಜಿಲ್‌ ಪೆಟ್ರೋಪೊಲಿಸ್‌ ನಗರದಲ್ಲಿ ಭೂ ಕುಸಿತದಿಂದ ಕೆಸರಿನಲ್ಲಿ ಸಿಲುಕಿರುವ ಮೃತ ದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಲ್ಲಿನ ಸಿಬ್ಬಂದಿ–ಎಪಿ/ಪಿಟಿಐ ಚಿತ್ರ   

ಪೆಟ್ರೋಪೊಲಿಸ್‌(ಬ್ರೆಜಿಲ್‌): ಇಲ್ಲಿ ಭೀಕರ ಮಳೆಯಿಂದ ಸಂಭವಿಸಿದ ಭೂ ಕುಸಿತ ಮತ್ತು ಪ್ರವಾಹದಿಂದಾಗಿ 94 ಮಂದಿ ಮೃತಪಟ್ಟಿದ್ದು, ಕಾಣೆಯಾದ 12 ಮಂದಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ದುರ್ಘಟನೆಯಲ್ಲಿ ಎಷ್ಟೋ ಮನೆ ಮತ್ತು ವಾಹನಗಳು ಕೊಚ್ಚಿ ಹೋಗಿವೆ. 400ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಎಷ್ಟು ಮೃತ ದೇಹಗಳು ಕೆಸರಿನಡಿ ಸಿಲುಕಿಕೊಂಡಿವೆ ಎಂಬುದೂ ಸ್ಪಷ್ಟವಾಗಿಲ್ಲ. ಇದರಲ್ಲಿ ಸತ್ತವರ ಸಂಖ್ಯೆಯನ್ನು ಬ್ರೆಜಿಲ್‌ನ ರಿಯೋ ಡಿ ಜನೈರೊ ಸರ್ಕಾರ ದೃಢಪಡಿಸಿದೆ.

ಇಡೀ ನಗರವೇ ಬೆಟ್ಟದ ಕೆಳಗಿ ಸಿಲುಕಿಕೊಂಡಿದೆ. ಎಷ್ಟು ಜನರು ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲು ಸಹ ಸಾಧ್ಯವಾಗಿಲ್ಲ. ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಪೆಟ್ರೋಪೊಲಿಸ್‌ ನಗರದ ಮೇಯರ್‌ ರೂಬೆನ್ಸ್‌ ಬೊಮ್ಟೆಂಪೊ ತಿಳಿಸಿದ್ದಾರೆ.

ADVERTISEMENT

ಘಟನೆಗೆ ರಷ್ಯಾ ಪ್ರವಾಸದಲ್ಲಿರುವ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸನಾರೋ ಸಂತಾಪ ಸೂಚಿಸಿದ್ದು, ನಗರದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.