ADVERTISEMENT

119 ಮಂದಿ ಹತ್ಯೆ: ಬ್ರೆಜಿಲ್‌ನಲ್ಲಿ ತೀವ್ರ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:48 IST
Last Updated 30 ಅಕ್ಟೋಬರ್ 2025, 14:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ರಿಯೊ ಡೆ ಜನೈರೊ: ಮಾದಕವಸ್ತು ಕಳ್ಳಸಾಗಣೆ ಜಾಲದ ಬೆನ್ನತ್ತಿ ಬ್ರೆಜಿಲ್‌ನ ಪೊಲೀಸ್ ಪಡೆಗಳು ರಿಯೊ ನಗರದಲ್ಲಿ ನಡೆಸಿದ ದಾಳಿಯಲ್ಲಿ 119 ಮಂದಿ ಮೃತಪಟ್ಟ ಬೆನ್ನಲ್ಲೇ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪೊಲೀಸರ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದು, ರಿಯೊ ಗವರ್ನರ್‌ ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ. 

ADVERTISEMENT

‘ರೆಡ್‌ ಕಮಾಂಡ್‌’ ರೀತಿಯ ಅನೇಕ ಮಾದಕವಸ್ತು ಗ್ಯಾಂಗ್‌ಗಳ ಚಟುವಟಿಕೆಯನ್ನು ಗಮನಿಸಿ, ಆ ಗುಂಪುಗಳ ಸದಸ್ಯರನ್ನು ಗುರಿಯಾಗಿಸಿ ಪೊಲೀಸರು ಮಂಗಳವಾರ–ಬುಧವಾರ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 115 ಮಂದಿ ಶಂಕಿತರನ್ನು ಹತ್ಯೆಗೈಯ್ಯಲಾಗಿದ್ದು, ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸರು ಕೂಡ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದರು. 

ಆದರೆ, ಪೊಲೀಸರು ನಿರ್ದಾಕ್ಷ್ಯಿಣ್ಯವಾಗಿ ನಿಂತಲ್ಲೇ ಜನರನ್ನು ಹತ್ಯೆಗೈದಿದ್ದಾರೆ. ಮಾದಕವಸ್ತು ಕಳ್ಳಸಾಗಣೆದಾರರನ್ನು ಮಾತ್ರವಲ್ಲದೇ ಅಮಾಯಕರನ್ನೂ ಹತ್ಯೆಗೈದಿದ್ದು, ಇದು ಅತಿದೊಡ್ಡ ಹತ್ಯಾಕಾಂಡ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೃತದೇಹಗಳನ್ನು ರಸ್ತೆಯ ಮೇಲೆ ಸಾಲಿನಲ್ಲಿರಿಸಿ, ಬ್ರೆಜಿಲ್‌ನ ಧ್ವಜಕ್ಕೆ ಕೆಂಪು ಬಣ್ಣ ಹಚ್ಚಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿವಿಧ ಮಾನವ ಹಕ್ಕು ಸಂಘಟನೆಗಳು, ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಕೂಡ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿ, ಪೊಲೀಸರ ಕಾರ್ಯವೈಖರಿಯನ್ನು ಆಕ್ಷೇಪಿಸಿದ್ದಾರೆ. ಇತ್ತ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಬ್ರೆಜಿಲ್‌ನ ಸುಪ್ರೀಂ ಕೋರ್ಟ್‌ ಕ್ಯಾಸ್ಟ್ರೋ ನಗರಸಭೆಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.