ADVERTISEMENT

ಬ್ರೆಜಿಲ್: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ

ಪಿಟಿಐ
Published 21 ನವೆಂಬರ್ 2025, 2:29 IST
Last Updated 21 ನವೆಂಬರ್ 2025, 2:29 IST
<div class="paragraphs"><p>ವಿಶ್ವಸಂಸ್ಥೆಯ&nbsp;ಹವಾಮಾನ&nbsp;ಬದಲಾವಣೆ&nbsp;ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ</p></div>

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ

   

ಚಿತ್ರ ಕೃಪೆ: ಎಕ್ಸ್‌

ಬೆಲೆಮ್: ಬ್ರೆಜಿಲ್‌ನ ಬೆಲೆಮ್‌ ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯ (ಸಿಒಪಿ–30) ಮುಖ್ಯ ಸಭಾಂಗಣದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 21 ಜನರು ಗಾಯಗೊಂಡಿದ್ದು, ಸಾವಿರಾರು ಜನರು ಜೀವ ರಕ್ಷಿಸಿಕೊಳ್ಳಲು ಹೊರ ಓಡಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಮುಖ್ಯ ಸಭಾಂಗಣವಾಗಿರುವ ಬ್ಲೂ ಝೋನ್‌ನಲ್ಲಿ ಸಭೆ, ಮಾತುಕತೆ, ಮಾಧ್ಯಮ ಕೇಂದ್ರ ಮತ್ತು  ಪ್ರಮುಖ ಗಣ್ಯರ ಕಚೇರಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹರಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಹೊರಕ್ಕೆ ಓಡಿದ್ದಾರೆ.

ಬೆಂಕಿ ಅವಘಡ ಸಂಭವಿಸಿದಾಗ ಭಾರತದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಕೂಡ ಭಾರತೀಯ ನಿಯೋಗದೊಂದಿಗೆ ಬ್ಲೂ ಝೋನ್‌ ವಲಯದಲ್ಲಿದ್ದರು, ಆದರೆ ಅವರು ಮತ್ತು ಇತರ ಅಧಿಕಾರಿಗಳು ಸುರಕ್ಷಿತವಾಗಿ ಸ್ಥಳದಿಂದ ಹೊರಬಂದರು ಎಂದು ಸಚಿವಾಲಯದ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

‘ಬೆಂಕಿಯ ಹೊಗೆಯಿಂದ ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದು, ಎಲ್ಲರಿಗೂ ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು. ಗಾಯಗೊಂಡವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ’ ಎಂದು ಶೃಂಗಸಭೆ ಆಯೋಜಿಸಿದ ವಿಶ್ವಸಂಸ್ಥೆಯ ಸಿಒಪಿ–30 ಮತ್ತು ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್‌ (UNFCCC) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಶ್ವಸಂಸ್ಥೆಯ ಭದ್ರತಾ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇನ್ನೊಂದು ವಲಯ ಅಂದರೆ ಗ್ರೀನ್‌ ಝೋನ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಶೃಂಗಸಭೆಯ ಕೊನೆಯ ದಿನವಾಗಿತ್ತು. ಆದರೆ ಬೆಂಕಿ ಅವಘಡದಿಂದ ಹಲವು ಸಭೆ, ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಅನಿಶ್ಚಿತತೆಯ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.