ADVERTISEMENT

ಯಾರಾದರೂ ಒಕೆ, ರಿಷಿ ಸುನಕ್ ಬೇಡ ಎಂದಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್!

ಪಿಟಿಐ
Published 24 ಅಕ್ಟೋಬರ್ 2022, 14:46 IST
Last Updated 24 ಅಕ್ಟೋಬರ್ 2022, 14:46 IST
ಬೋರಿಸ್ ಜಾನ್ಸನ್ ಹಾಗೂ ಸುನಕ್
ಬೋರಿಸ್ ಜಾನ್ಸನ್ ಹಾಗೂ ಸುನಕ್   

ಲಂಡನ್:ಬ್ರಿಟನ್ ಯುವ ರಾಜಕಾರಣಿ ಹಾಗೂ ಭಾರತಮೂಲದ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್‌ಗೆ ಇದೀಗ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡಳಿತ ಮುನ್ನಡೆಸುವಂತಾಗಿದೆ.

ಲಿಜ್ ಟ್ರಸ್‌ ಪ್ರಧಾನಿಯಾಗುವ ಮುನ್ನಬ್ರಿಟನ್ ಪ್ರಧಾನಿ ಆಯ್ಕೆ ಚುನಾವಣೆ ಬಿರುಸು ಪಡೆದಿತ್ತು. ರಿಷಿ ಸುನಕ್ ಅವರನ್ನು ಬಿಟ್ಟು ಬೇರೆ ಯಾರನ್ನಾದರೂ ಬೆಂಬಲಿಸಿ ಎಂದು ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ಜುಲೈ 7ರಂದು ರಾಜೀನಾಮೆ ನೀಡಿದ್ದ ಬೋರಿಸ್ ಅವರು, ತಾವು ಬೆಂಬಲ ಕಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಆರೋಪಿಸಲಾಗುತ್ತಿರುವ ರಿಷಿ ಸುನಕ್ ಅವರಿಗೆ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ಬೆಂಬಲ ನೀಡದಂತೆ ನಾಯಕನ ಆಯ್ಕೆ ಚುನಾವಣೆಯಲ್ಲಿ ಸೋತ ಬೆಂಬಲಿಗರಿಗೆ ಸೂಚಿಸಿದ್ದಾರೆ ಎಂದು ಅಲ್ಲಿನ ಟೈಮ್ಸ್ ದಿನಪತ್ರಿಕೆ ವರದಿ ಮಾಡಿತ್ತು.

ತಾನು ಯಾವುದೇ ನಾಯಕತ್ವದ ಅಭ್ಯರ್ಥಿಗಳನ್ನು ಅನುಮೋದಿಸುವುದಿಲ್ಲ ಅಥವಾ ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಜಾನ್ಸನ್, ಪಕ್ಷದ ನಾಯಕನ ಆಯ್ಕೆ ಚುನಾವಣೆಯಲ್ಲಿ ಸೋತ ಸ್ಪರ್ಧಿಗಳೊಂದಿಗೆ ಸಂಭಾಷಣೆ ನಡೆಸಿದ್ದಾರೆ ಮತ್ತು ಸುನಕ್ ಪ್ರಧಾನಿಯಾಗಬಾರದು ಎಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿತ್ತು.

ಈ ಸಭೆ ಬಗ್ಗೆ ತಿಳಿದಿರುವ ಮೂಲವೊಂದು ಹಂಗಾಮಿ ಪ್ರಧಾನ ಮಂತ್ರಿಯು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರೂಸ್ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಅವರ ಸಂಪುಟ ಸಹೋದ್ಯೋಗಿಗಳಾದ ಜಾಕೋಬ್ ರೀಸ್-ಮೊಗ್ ಮತ್ತು ನಾಡಿನ್ ಡೋರಿಸ್ ಸಹ ಇದನ್ನು ಅನುಮೋದಿಸಿದ್ದರು.

ವಾಣಿಜ್ಯ ಸಚಿವೆಪೆನ್ನಿ ಮರ್ಡೌಂಟ್ ಬಗ್ಗೆಯೂ ಜಾನ್ಸನ್ ವಿಶ್ವಾಸ ಹೊಂದಿದ್ದರು. ಸುನಕ್ ಬದಲಿಗೆ ಇವರನ್ನಾದರೂ ಆರಿಸಬಹುದು ಎಂಬುದು ಅವರ ಮತ್ತೊಂದು ಆಯ್ಕೆಯಾಗಿತ್ತು.

ತಮ್ಮ ಸಂಪುಟದಿಂದ ರಾಜೀನಾಮೆ ನೀಡುವ ಮೂಲಕ ದ್ರೋಹ ಎಸಗಿದ್ದಾರೆ ಎಂದು ರಿಷಿ ಸುನಕ್ ವಿರುದ್ಧ ಕೋಪಗೊಂಡಿರುವ ಬೋರಿಸ್ ಜಾನ್ಸನ್ ಮತ್ತು ಅವರ ಬಣ ‘ಯಾರಾದರೂ ಒಕೆ, ರಿಷಿ ಸುನಕ್ ಬೇಡ’ ಎಂಬ ಗುಪ್ತ ಪ್ರಚಾರ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.