ವಾಷಿಂಗ್ಟನ್: ಅಮೆರಿಕದಲ್ಲಿ 340ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಹಾಗೂ ₹137 ಕೋಟಿ ನಷ್ಟ ಉಂಟು ಮಾಡಿದ ಕಾಲ್ ಸೆಂಟರ್ ಹಗರಣದ ಸೂತ್ರಧಾರ ಭಾರತ ಮೂಲದ ವ್ಯಕ್ತಿಗೆ 16 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಅನುಮತಿ ಪಡೆಯದೇ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಭಾರತದ ಮೆಹಬೂಬ್ ಮನ್ಸೂರ್ ಅಲಿ ಚಾರ್ನಿಯಾ ತಪ್ಪಿತಸ್ಥರಾಗಿದ್ದಾರೆ ಎಂದು ಜನವರಿಯಲ್ಲಿ ಘೋಷಿಸಲಾಗಿತ್ತು.
ವಂಚನೆಗೆ ಒಳಗಾದವರಿಗೆ ಹಣ ಪಾವತಿ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.