ADVERTISEMENT

ಇಂಡೋ–ಪೆಸಿಫಿಕ್ ಒಪ್ಪಂದ ವ್ಯಾಪಾರಕ್ಕಷ್ಟೆ ಸೀಮಿತವಾಗದಿರಲಿ: ಚಾಥಮ್ ಹೌಸ್

ಪಿಟಿಐ
Published 22 ಜುಲೈ 2025, 13:47 IST
Last Updated 22 ಜುಲೈ 2025, 13:47 IST
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯು.ಕೆ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ (ಪಿಟಿಐ ಸಂಗ್ರಹ ಚಿತ್ರ)
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯು.ಕೆ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ (ಪಿಟಿಐ ಸಂಗ್ರಹ ಚಿತ್ರ)   

ಲಂಡನ್: ಭಾರತದೊಂದಿಗಿನ ಸಂಬಂಧವನ್ನು ವ್ಯಾಪಾರ ಒಪ್ಪಂದವನ್ನೂ ಮೀರಿ ವಿಸ್ತರಿಸಲು ಮತ್ತು ಬ್ರಿಟನ್‌ನ ಇಂಡೊ–ಪೆಸಿಫಿಕ್ ತಂತ್ರವನ್ನು ನವೀಕರಿಸುವಂತೆ ಲಂಡನ್‌ನ ಸ್ವತಂತ್ರ ಸಂಶೋಧನೆ ಮತ್ತು ವಿಶ್ಲೇಷಣೆ ಸಂಸ್ಥೆ ‘ಚಾಥಮ್ ಹೌಸ್’ ಕರೆ ನೀಡಿದೆ. ಪ್ರಧಾನಿ ಮೋದಿ ಗುರುವಾರ ಯುಕೆಗೆ ಭೇಟಿ ನೀಡಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಲಿದ್ದು, ಅದಕ್ಕೂ ಮುನ್ನ ಸಂಸ್ಥೆ ಈ ಹೇಳಿಕೆ ನೀಡಿದೆ.

‘ಇಂಡೋ-ಪೆಸಿಫಿಕ್:ಯು.ಕೆಗೆ ಯಾಕೆ ಹೆಚ್ಚಿನ ಆದ್ಯತೆ?’ ಎಂಬ ವಿಷಯದಲ್ಲಿ ಸಂಶೋಧನಾ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಭಾರತದಂತೆಯೇ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಇಲ್ಲದ ದಕ್ಷಿಣ ಏಷ್ಯಾದ ವಿಶಾಲ ಪ್ರದೇಶವನ್ನು ನಿರ್ಲಕ್ಷಿಸಕೂಡದು ಮತ್ತು ದ್ವಿಪಕ್ಷೀಯ ಸಂಬಂದಕ್ಕೆ ಮಾತ್ರ ಒತ್ತುಕೊಡಕೂಡದು ಅದು ಎಚ್ಚರಿಸಿದೆ.

ಯು.ಕೆ ಮತ್ತು ಭಾರತದ ನಡುವೆ ನಿಕಟ ಸಂಬಂಧಕ್ಕಾಗಿ ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ದೇಶಗಳೊಂದಿಗೆ ತ್ರಿಪಕ್ಷೀಯ ಸಹಕಾರವನ್ನು ಉತ್ತೇಜಿಸಬೇಕು ಎಂದು ಅದು ಆಗ್ರಹಿಸಿದೆ.

ADVERTISEMENT

ಎಫ್‌ಟಿಎಗೆ ಮೇ 6, 2025 ರಂದು ಭಾರತ ಮತ್ತು ಯು.ಕೆ ಒಪ್ಪಿಗೆ ನೀಡಿದ್ದು, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 120 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.