ADVERTISEMENT

ಪೌರತ್ವ ಕಾಯ್ದೆ ತಿದ್ದುಪಡಿಗೆ ಮುಂದಾದ ಕೆನಡಾ: ಭಾರತೀಯರಿಗೆ ಅನುಕೂಲ

ಪಿಟಿಐ
Published 24 ನವೆಂಬರ್ 2025, 16:03 IST
Last Updated 24 ನವೆಂಬರ್ 2025, 16:03 IST
   

ಒಟ್ಟಾವ: ಕೆನಡಾ ಸರ್ಕಾರವು ಪೌರತ್ವ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದು, ಅಲ್ಲಿ ವಾಸಿಸುತ್ತಿರುವ ಭಾರತ ಮೂಲದವರಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. 

‘ಪೌರತ್ವ ಕಾಯ್ದೆ (2025) ತಿದ್ದುಪಡಿಗೆ ಅಲ್ಲಿನ ರಾಜ ಒಪ್ಪಿಗೆ ನೀಡಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಈ ಕಾಯ್ದೆಯು ಮಹತ್ವದ ಮೈಲುಗಲ್ಲಾಗಲಿದೆ’ ಎಂದು ಕೆನಡಾ ಸರ್ಕಾರ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದೆ.

ನೂತನ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ, ವಿಧೇಯಕವು ಜಾರಿಗೆ ಬರುವ ಮೊದಲು ಜನಿಸಿದ ಮಕ್ಕಳಿಗೂ ಕೆನಡಾದ ಪೌರತ್ವವನ್ನು ನೀಡಲಾಗುತ್ತದೆ ಎಂದು ಅದು ತಿಳಿಸಿದೆ.

ADVERTISEMENT

2009ರ ಕಾಯ್ದೆಯ ಅನುಸಾರ, ಕೆನಡಾದ ಪೌರತ್ವ ಹೊಂದಿರುವ ಪೋಷಕರ ಮಕ್ಕಳು ಕೆನಡಾದಿಂದ ಹೊರಗಡೆ ಜನಿಸಿದರೆ ಅಥವಾ ದತ್ತು ಪಡೆದವರಾಗಿದ್ದರೆ ಅವರಿಗೆ ವಂಶಪಾರಂಪರ್ಯವಾಗಿ ಕೆನಡಾ ಪೌರತ್ವ ಲಭಿಸುತ್ತಿರಲಿಲ್ಲ. ಇದರಿಂದಾಗಿ ದೇಶದ ಹೊರಗೆ ಜನಿಸಿದ ಮಗುವನ್ನು ಹೊಂದಿದ ಭಾರತ ಮೂಲದ ಹಲವರಿಗೆ ಸಮಸ್ಯೆಯಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.