ADVERTISEMENT

ಪಾಪ್ ಗಾಯಕ ಜಸ್ಟಿನ್‌ ಬೈಬರ್‌ಗೆ ಕೋವಿಡ್; ಲಾಸ್ ವೇಗಾಸ್ ಕಾರ್ಯಕ್ರಮ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2022, 6:45 IST
Last Updated 21 ಫೆಬ್ರುವರಿ 2022, 6:45 IST
 ಜಸ್ಟಿನ್‌ ಬೈಬರ್‌
ಜಸ್ಟಿನ್‌ ಬೈಬರ್‌   

ವಾಷಿಂಗ್ಟನ್:ಪಾಪ್ ಗಾಯಕ ಜಸ್ಟಿನ್‌ ಬೈಬರ್‌ ಅವರಿಗೆ ಕೋವಿಡ್–19 ದೃಢಪಟ್ಟಿದೆ. ಈ ವಿಚಾರವನ್ನು ಅವರ ಪ್ರತಿನಿಧಿ ಖಚಿತಪಡಿಸಿದ್ದು, ಯಶಸ್ವಿ ಗಾಯಕ ಬೈಬರ್‌ ಅವರಿಗೆ ಶನಿವಾರ ಸೋಂಕು ಖಚಿತವಾಗಿದೆ. ಆದರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬೈಬರ್‌ ಅವರು ಲಾಸ್‌ ವೇಗಾಸ್‌ನಲ್ಲಿರುವ ಟಿ–ಮೊಬೈಲ್ ಅರೇನಾದಲ್ಲಿತಮ್ಮ'ಜಸ್ಟಿಸ್‌ ವರ್ಲ್ಡ್ ಟೂರ್'ನ ಭಾಗವಾಗಿ ಪ್ರದರ್ಶನ ನೀಡಬೇಕಿತ್ತು. ಇದೀಗ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಈ ಬಗ್ಗೆ ಟಿ–ಮೊಬೈಲ್ ಅರೇನಾದ ಸಾಮಾಜಿಕ ಮಾಧ್ಯಮ ತಂಡವೂ ಪ್ರಕಟಣೆ ಹೊರಡಿಸಿದೆ. 'ಜಸ್ಟಿಸ್‌ ಟೂರ್ ಬಳಗದಲ್ಲಿ ಕೋವಿಡ್–19 ದೃಢಪಟ್ಟಿರುವುದರಿಂದ, ವೇಗಾಸ್‌ನಲ್ಲಿ ಭಾನುವಾರ ನಡೆಯಬೇಕಿದ್ದ ಪ್ರದರ್ಶನವನ್ನು ದುರದೃಷ್ಟವಶಾತ್ ಮುಂದೂಡಬೇಕಾಗಿದೆ. ಇದರಿಂದ ಜಸ್ಟಿನ್ ಸಹಜವಾಗಿಯೇ ತುಂಬಾ ನಿರಾಶೆಗೊಂಡಿದ್ದಾರೆ. ಆದರೆ, ಸಿಬ್ಬಂದಿ ಮತ್ತು ಅಭಿಮಾನಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಅವರು ಯಾವಾಗಲೂ ಮೊದಲ ಆದ್ಯತೆ ನೀಡುತ್ತಾರೆ.ಸ್ಯಾನ್ ಡಿಯಾಗೋದಲ್ಲಿ ಆರಂಭವಾದ ಟೂರ್‌ ಭಾರಿ ಯಶಸ್ಸು ಕಂಡಿದೆ. ಜಸ್ಟಿನ್ ಅವರುಲಾಸ್ ವೇಗಾಸ್‌ನಲ್ಲಿ ಅಭಿಮಾನಿಗಳಿಗಾಗಿ ಸಾಧ್ಯವಾದಷ್ಟು ಬೇಗ ಅದ್ಭುತ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ' ಎಂದು ತಿಳಿಸಲಾಗಿದೆ.

ADVERTISEMENT

Justin Bieber is recovering from COVID-19 in a recent post from Scooter Braun. Vegas show has been rescheduled to June 28, 2022. As far as the shows set to happen this week, we will keep you updated as soon as more information is revealed.pic.twitter.com/s4CgD83wu6

— Justice Tour Updates (@JusticeTourNews)February 20, 2022

ಬೈಬರ್‌ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.