ADVERTISEMENT

ಟೆಕ್ಸಾಸ್: ಸುಮಾರು 100 ವಾಹನಗಳ ಡಿಕ್ಕಿ, ಐವರು ಸಾವು

ಏಜೆನ್ಸೀಸ್
Published 12 ಫೆಬ್ರುವರಿ 2021, 6:18 IST
Last Updated 12 ಫೆಬ್ರುವರಿ 2021, 6:18 IST
ಚಿತ್ರ ಕೃಪೆ – ಫೋರ್ಟ್‌ವರ್ತ್‌ ಅಗ್ನಿಶಾಮಕ ದಳದ ಟ್ವಿಟರ್‌ ಖಾತೆ
ಚಿತ್ರ ಕೃಪೆ – ಫೋರ್ಟ್‌ವರ್ತ್‌ ಅಗ್ನಿಶಾಮಕ ದಳದ ಟ್ವಿಟರ್‌ ಖಾತೆ   

ಆಸ್ಟಿನ್‌: ಉತ್ತರ ಟೆಕ್ಸಾಸ್‌ನ ಫೋರ್ಟ್‌ವರ್ತ್‌ ನಗರದ ಮಂಜಿನಿಂದಾವೃತವಾದ ಹೆದ್ದಾರಿಯಲ್ಲಿ ಸುಮಾರು 100ರಷ್ಟು ವಾಹನಗಳು ಡಿಕ್ಕಿಯಾಗಿ ಐವರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂಜಿನ ಕಾರಣಕ್ಕೆ ಅಪಘಾತ ಸಂಭವಿಸಿರಬಹುದು ಎಂದು ಫೋರ್ಟ್‌ವರ್ತ್‌ ಅಗ್ನಿಶಾಮಕ ದಳದ ವಕ್ತಾರ ಮೈಕೆಲ್ ಡ್ರಿವ್ಡಾಲ್ ಹೇಳಿದ್ದಾರೆ.

ಐವರು ಮೃತಪಟ್ಟಿದ್ದು, 36 ಮಂದಿಯನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಜೇಸನ್ ಮೆಕ್ಲಾಫ್ಲಿನ್ ಎಂಬವರು ಅಪಘಾತದ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹತ್ತಾರು ಕಾರುಗಳು, ಟ್ರಕ್‌ಗಳು ಡಿಕ್ಕಿಯಾಗಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದಾಗಿದೆ. 100ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ ಎಂದು ಅವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.