ADVERTISEMENT

ವಿಡಿಯೊ| ಲಂಕಾ ಬಾಂಬ್‌ ದಾಳಿಗೂ ಮುನ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು...

ಏಜೆನ್ಸೀಸ್
Published 23 ಏಪ್ರಿಲ್ 2019, 12:30 IST
Last Updated 23 ಏಪ್ರಿಲ್ 2019, 12:30 IST
ಚಿತ್ರ ಕೃಪೆ: Siyatha TV
ಚಿತ್ರ ಕೃಪೆ: Siyatha TV   

ಕೊಲೊಂಬೊ: ಶ್ರೀಲಂಕಾದ ಚರ್ಚ್‌ ಮತ್ತು ಹೋಟೆಲ್‌ಗಳ ಮೇಲೆ ಭಾನುವಾರ ನಡೆದ ಬಾಂಬ್‌ ದಾಳಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಉಗ್ರ ಸಂಘಟನೆ ಐಎಸ್‌ಐಎಸ್‌ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಅಲ್ಲದೆ, ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ನ ಮಸೀದಿಗಳಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎಂದೂ ಹೇಳಲಾಗುತ್ತಿದೆ.

ಹೀಗಿರುವಾಗಲೇ, ಚರ್ಚ್‌ನಲ್ಲಿ ಬಾಂಬ್‌ ದಾಳಿ ನಡೆಸುವುದಕ್ಕೂ ಮೊದಲು ಆತ್ಮಾಹುತಿ ದಾಳಿಕೋರನೊಬ್ಬ ಸ್ಫೋಟಕವುಳ್ಳ ಬ್ಯಾಗ್‌ ಹೊತ್ತು ಚರ್ಚ್‌ ಪ್ರವೇಶಿಸುವ ವಿಡಿಯೊ ತುಣುಕು ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದು, ಸದ್ಯ ಮಾಧ್ಯಮಗಳಿಗೆ ಬಿಡುಗಡೆಯಾಗಿದೆ. ಜನರ ಮಧ್ಯೆ ಸಾಮಾನ್ಯರಂತೆ ನಡೆದು ಬರುವ ಆತ, ಯಾವುದೇ ಅಂಜಿಕೆ ಇಲ್ಲದೆ ಚರ್ಚ್‌ ಪ್ರವೇಶಿಸುತ್ತಾನೆ.ನಂತರ ಅಲ್ಲಿ ನಡೆಯುವುದು ಬೆಚ್ಚಿ ಬೀಳಿಸುವ ಕೃತ್ಯ.

ಇಲ್ಲಿದೆ ವಿಡಿಯೊ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.