ADVERTISEMENT

ಭಾರತದ ಗಡಿಯಲ್ಲಿ ಸೇನೆ ಮುನ್ನಡೆಸಲು ಹೊಸ ನಾಯಕನನ್ನು ನೇಮಿಸಿದ ಚೀನಾ

ಪಿಟಿಐ
Published 7 ಸೆಪ್ಟೆಂಬರ್ 2021, 7:20 IST
Last Updated 7 ಸೆಪ್ಟೆಂಬರ್ 2021, 7:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್: ಭಾರತದ ಪೂರ್ವ ಲಡಾಖ್ ಗಡಿ ಭಾಗದಲ್ಲಿ ನಿಯೋಜಿಸಿರುವ ಚೀನಾದ ರಕ್ಷಣಾ ಪಡೆ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ವೆಸ್ಟರ್ನ್‌ ಥಿಯೇಟರ್‌ ಕಮಾಂಡ್‌ನ ನೂತನ ಕಮಾಂಡರ್‌ ಆಗಿ ಜನರಲ್‌ ವಾಂಗ್‌ ಹೈಜಿಯಾಂಗ್‌ ಅವರನ್ನು ನೇಮಕ ಮಾಡಲಾಗಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ವಾಂಗ್‌ ಅವರನ್ನು ನೇಮಕ ಮಾಡಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ. ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಯೋಧರನ್ನು ಚೀನಾ – ಭಾರತದ ಗಡಿಭಾಗದಲ್ಲಿ ನಿಯೋಜಿಸಲಾಗಿದೆ.

ಕ್ಸಿ ಜಿನ್‌ಪಿಂಗ್‌ ಅವರು, ಆಡಳಿತಾರೂಢ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಾದ (ಸಿಪಿಸಿ) ಕೇಂದ್ರ ಮಿಲಿಟರಿ ಆಯೋಗದ (ಸಿಎಂಸಿ) ಮುಖ್ಯಸ್ಥರಾಗಿರುವ ವಾಂಗ್ ಮತ್ತು ಇತರ ನಾಲ್ಕು ಸೇನಾ ಅಧಿಕಾರಿಗಳನ್ನು ಜನರಲ್ ಹುದ್ದೆಗೆ ಬಡ್ತಿ ನೀಡಿದ್ದಾರೆ. ಇದು ಚೀನಾದ ಸಕ್ರಿಯ ಮಿಲಿಟರಿ ಸೇವೆಯಲ್ಲಿರುವ ಅಧಿಕಾರಿಗಳಿಗೆ ನೀಡುವ ಅತ್ಯುನ್ನತ ಶ್ರೇಣಿಯ ಹುದ್ದೆಯಾಗಿದೆ‘ ಎಂದು ರಾನ್ ವೆಬ್‌ಸೈಟ್ ಚಿನಾಮಿಲ್ ಸೋಮವಾರ ರಾತ್ರಿ ವರದಿ ಮಾಡಿದೆ.

ADVERTISEMENT

ಸೆಂಟ್ರಲ್ ಮಿಲಿಟರಿ ಕಮಿಷನ್, ಪೀಪಲ್ಸ್ ಲಿಬರೇಶನ್ ಆರ್ಮಿಯ ಮುಖ್ಯ ಸಂಸ್ಥೆಯಾಗಿದೆ.‌ ಕಳೆದ ಮೇ ತಿಂಗಳಲ್ಲಿ ಭಾರತದ ಪೂರ್ವ ಲಡಾಖ್‌ನಲ್ಲಿ ಚೀನಾ–ಭಾರತದ ನಡುವೆ ಸಂಘರ್ಷ ಶುರುವಾದಾಗಿನಿಂದ ಇಲ್ಲಿವರೆಗೆ ವೆಸ್ಟರ್ನ್‌ ಥಿಯೇಟರ್‌ ಕಮಾಂಡ್‌ ಹುದ್ದೆಯಲ್ಲಿ ಮೂವರು ಕಮಾಂಡರ್‌ಗಳು ಬದಲಾಗಿದ್ದಾರೆ. ಜನರಲ್ ವಾಂಗ್‌ ಅವರು ಈ ವಿಭಾಗವನ್ನು ಮುನ್ನಡೆಸುವ ನಾಲ್ಕನೇ ಕಮಾಂಡರ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.