ADVERTISEMENT

ಅಮೆರಿಕ ಸೆನೆಟರ್‌ಗೆ ಪ್ರವೇಶ ನಿಷೇಧಿಸಿದ ಚೀನಾ

ಏಜೆನ್ಸೀಸ್
Published 13 ಜುಲೈ 2020, 12:01 IST
Last Updated 13 ಜುಲೈ 2020, 12:01 IST
   

ಬೀಜಿಂಗ್‌: ಅಮೆರಿಕ ಸೆನೆಟರ್‌ಗಳಾದ ಮಾರ್ಕೊ ರುಬಿಯೊ ಮತ್ತು ಟೆಡ್‌ ಕ್ರೂಜ್‌, ಪ್ರತಿನಿಧಿ ಕ್ರಿಸ್‌ ಸ್ಮಿತ್‌ ಮತ್ತು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ಸ್ಯಾಮ್‌ ಬ್ರೌನ್‌ಬ್ಯಾಕ್‌ ಅವರಿಗೆ ಚೀನಾ ಪ್ರವೇಶ ನಿಷೇಧಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ನೀತಿಗಳನ್ನು ಟೀಕಿಸಿರುವುದಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ತಿಳಿಸಿದೆ.

‘ಅಮೆರಿಕದ ಕ್ರಮಗಳಿಂದ ಉಭಯ ದೇಶಗಳ ಸಂಬಂಧಕ್ಕೆ ಅಪಾರ ಹಾನಿಯಾಗಿದೆ. ದೇಶದ ಸಾರ್ವಭೌಮತ್ವವವನ್ನು ಎತ್ತಿ ಹಿಡಿಯಲು ನಾವು ಬದ್ಧರಾಗಿದ್ದೇವೆ. ನಮ್ಮ ನೀತಿಗಳನ್ನು ಟೀಕಿಸುವುದು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದಂತೆ’ ಎಂದು ವಿದೇಶಾಂಗ ಸಚಿವಾಲಯದ ಝಾವೊ ಲಿಜಿಯಾನ್‌ ತಿಳಿಸಿದ್ದಾರೆ.

ADVERTISEMENT

‘ಪರಿಸ್ಥಿತಿಯನ್ನು ಅವಲೋಕಿಸಿ ಮತ್ತೆ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ’ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.