ADVERTISEMENT

ಚೀನಾದಿಂದ ಗಡಿ ಸಮೀಪ ಅಭಿವೃದ್ಧಿ

ಪಿಟಿಐ
Published 21 ಮೇ 2021, 19:47 IST
Last Updated 21 ಮೇ 2021, 19:47 IST

ಬೀಜಿಂಗ್‌: ಭಾರತದ ಅರುಣಾಚಲ ಪ್ರದೇಶ, ಭೂತಾನ್‌ ಮತ್ತು ನೇಪಾಳ ದೇಶಗಳ ಗಡಿ ಸಮೀಪ ಇರುವ ಟಿಬೆಟ್‌ನ ಗ್ರಾಮಗಳಲ್ಲಿ ಮೂಲ ಸೌರ್ಕಯ ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೆ ಚೀನಾ ವೇಗ ನೀಡಿದೆ ಎಂದು ಟಿಬೆಟ್‌ ಕುರಿತು ಚೀನಾ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ತಿಳಿಸಿದೆ.

ಹಿಮಾಲಯ ಪ್ರದೇಶದೊಂದಿಗೆ ಸುಮಾರು 4,000 ಕಿ.ಮೀ ಉದ್ದದ ಬಾಹ್ಯ ಗಡಿರೇಖೆಯನ್ನು ಹಂಚಿಕೊಳ್ಳುವುದರಿಂದ ಟಿಬೆಟ್‌ನ ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜನರ ಜೀವನವನ್ನು ಸುಧಾರಿಸುವುದು ಮುಖ್ಯವಾಗಿದೆ ಎಂದು ಚೀನಾ ಪ್ರತಿಪಾದಿಸಿದೆ. ಈ ಕುರಿತು ಅದು‌ ‘1951ರಿಂದ ಟಿಬೆಟ್: ವಿಮೋಚನೆ, ಅಭಿವೃದ್ಧಿ ಮತ್ತು ಸಮೃದ್ಧಿ’ ಎಂಬ ವರದಿಯಲ್ಲಿ ತಿಳಿಸಿದೆ.

ಗಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜನರ ಜೀವನವನ್ನು ಸುಧಾರಿಸಲು ಎಲ್ಲಾ ಹಂತದ ಪ್ರಯತ್ನವನ್ನೂ ಸರ್ಕಾರ ಮಾಡಲಿದೆ ಎಂದು ಅದು ಹೇಳಿದೆ.

ADVERTISEMENT

ಆಡಳಿತದಲ್ಲಿರುವ ಕಮ್ಯುನಿಸ್ಟ್ ಪಕ್ಷದ ಮಾರ್ಗದರ್ಶನದಲ್ಲಿ ಟಿಬೆಟ್‌ನ ಗಡಿ ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಣಕಾಸನ್ನು ಹಂಚಿಕೆ ಮಾಡಲಾಗುವುದು ಎಂದು ಚೀನಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.