ADVERTISEMENT

ವಿಶ್ವದ ಮೊದಲ ಡ್ರೋನ್ ಹಡಗು ನಿರ್ಮಾಣ

ಭೂಮಿ, ವಾಯುಮಾರ್ಗದ ದಾಳಿ ಎದುರಿಸಲು ಸಮರ್ಥ: ಚೀನಾ

ಪಿಟಿಐ
Published 15 ಏಪ್ರಿಲ್ 2019, 17:19 IST
Last Updated 15 ಏಪ್ರಿಲ್ 2019, 17:19 IST
ಡ್ರೋನ್‌ ಹಡಗು
ಡ್ರೋನ್‌ ಹಡಗು   

ಬೀಜಿಂಗ್: ಚೀನಾ, ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಹಡಗನ್ನು ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ಪೂರೈಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಈ ಡ್ರೋನ್ ಹಡಗು ಭೂಮಿ ಹಾಗೂ ವಾಯುಮಾರ್ಗದ ದಾಳಿಗಳನ್ನುಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಚೀನಾದ ಸೇನಾತಜ್ಞರು ಹೇಳಿದ್ದಾರೆ.

ಚೀನಾ ಹಡಗು ನಿರ್ಮಾಣ ಉದ್ದಿಮೆ ನಿಗಮದ (ಸಿಎಸ್‌ಐಸಿ) ಅಡಿಯಲ್ಲಿ ವುಚಂಗ್ ಹಡಗು ನಿರ್ಮಾಣ ಉದ್ದಿಮೆ ಸಮೂಹ ಈ ಡ್ರೋನ್ ಹಡಗು ತಯಾರಿಸಿದ್ದು, ಇದಕ್ಕೆ ಮರೈನ್ ಲಿಜರ್ಡ್ ಎಂದು ಹೆಸರಿಡಲಾಗಿದೆ.

ADVERTISEMENT

ವಾಯು–ಭೂಮಿ–ಸಮುದ್ರ ಮಾರ್ಗಗಳಲ್ಲಿ ಎದುರಾಗುವ ದಾಳಿಗಳನ್ನು ಸಮಗ್ರವಾಗಿ ಮತ್ತು ಮಾನವರಹಿತವಾಗಿ ನಿರ್ವಹಿಸಲು ಡ್ರೋನ್ ಹಡಗು ಸಮರ್ಥವಾಗಿದೆ ಎನ್ನುತ್ತದೆ ವರದಿ.

ಮರೈನ್ ಲಿಜರ್ಡ್ ವಿಶೇಷತೆ

* ಎರಡು ಮೆಷಿನ್ ಗನ್, ಜಲ ಮತ್ತು ವಾಯುಮಾರ್ಗದಲ್ಲಿ ಉಡಾವಣೆ ಮಾಡುವಂತಹ ಕ್ಷಿಪಣಿಗಳ ಸಂಗ್ರಹ ಮತ್ತು ಉಡಾವಣಾ ವ್ಯವಸ್ಥೆ ಮಾಡಲಾಗಿದೆ

* ಸ್ವಯಂಚಾಲಿತವಾಗಿ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ಸಂಚರಿಸುವ ಸಾಮರ್ಥ್ಯ ಇದೆ

* ಕರಾವಳಿಗಳ ರಕ್ಷಣೆಗೆ ಈ ಡ್ರೋನ್ ಹಡಗು ಬಳಕೆ ಅತ್ಯುತ್ತಮವಾದುದು ಎನ್ನುವುದು ಸೇನೆಯ ನಿಲುವುಗ

ಡ್ರೋನ್ ಹಡಗಿನ ಬಗ್ಗೆ ಒಂದಿಷ್ಟು

* ಗರಿಷ್ಠ ಕಾರ್ಯನಿರ್ವಹಣಾ ವ್ಯಾಪ್ತಿ1,200 ಕಿ.ಮೀ.

* ಹಡಗಿನ ಉದ್ದ12 ಮೀ.

* ನಾಟಿಕಲ್ಗರಿಷ್ಠ ವೇಗ50

* ಭೂಮಿ ಮೇಲಿನ ಗರಿಷ್ಠ ವೇಗ20 ಕಿ.ಮೀ.

*ವೆಚ್ಚ12,34,875 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.