ADVERTISEMENT

ಚೀನಾ: ಮಾನವರಹಿತ ಹೆಲಿಕಾಪ್ಟರ್‌ ಡ್ರೋನ್‌ ಪರೀಕ್ಷೆ

ಭಾರತದ ಗಡಿಯಲ್ಲಿ ನಿಯೋಜಿಸುವ ಉದ್ದೇಶ

ಪಿಟಿಐ
Published 25 ಮೇ 2020, 18:10 IST
Last Updated 25 ಮೇ 2020, 18:10 IST
ಚೀನಾ ಸೇನೆ (ಪ್ರಾತಿನಿಧಿಕ ಚಿತ್ರ)
ಚೀನಾ ಸೇನೆ (ಪ್ರಾತಿನಿಧಿಕ ಚಿತ್ರ)   

ಬೀಜಿಂಗ್: ಚೀನಾದ ಮೊದಲ ಮಾನವರಹಿತ ಹೆಲಿಕಾಪ್ಟರ್‌ ಡ್ರೋನ್‌ನ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.

ಅತಿ ಎತ್ತರದ ಪ್ರದೇಶದಿಂದ ದಾಳಿ ನಡೆಸಲು ಮತ್ತು ನಿಗಾವಹಿಸುವ ಸಾಮರ್ಥ್ಯ ಹೊಂದಿರುವ ಈ ಸುಸಜ್ಜಿತ ಹೆಲಿಕಾಪ್ಟರ್‌ ಡ್ರೋನ್‌ ಅನ್ನು ಭಾರತದ ಗಡಿ ಪ್ರದೇಶದಲ್ಲಿ ನಿಯೋಜಿಸಲು ಚೀನಾ ಉದ್ದೇಶಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

’ಎಆರ್‌500ಸಿ‘ ಮಾನವರಹಿತ ಹೆಲಿಕಾಪ್ಟರ್‌ ಡ್ರೋನ್‌ ಅನ್ನು ಚೀನಾದ ವೈಮಾನಿಕ ಕೈಗಾರಿಕಾ ನಿಗಮ (ಎವಿಐಸಿ) ಅಭಿವೃದ್ಧಿಪಡಿಸಿದೆ. ಪೂರ್ವ ಚೀನಾ ಜಿಯಾಂಗ್‌ಷಿ ಪ್ರಾಂತ್ಯದ ಪೊಯಾಂಗ್‌ನಲ್ಲಿ ಈ ಹೆಲಿಕಾಪ್ಟರ್‌ನ ಪರೀಕ್ಷೆ ನಡೆಸಲಾಯಿತು.

ADVERTISEMENT

ಐದು ಗಂಟೆಗಳ ಕಾಲ ಹಾರಾಟ ನಡೆಸುವ ಶಕ್ತಿ ಹೊಂದಿರುವ ಈ ಹೆಲಿಕಾಪ್ಟರ್‌, ಪ್ರತಿ ಗಂಟೆಗೆ 170 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತದೆ ಮತ್ತು 500 ಕಿಲೋ ಗ್ರಾಂ ತೂಕವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಕೀಬೋರ್ಡ್‌ ಮತ್ತು ಸ್ಕ್ರೀನ್‌ ಮೂಲಕವೇ ಸುಲಭವಾಗಿ ಈ ಹೆಲಿಕಾಪ್ಟರ್‌ ನಿಯಂತ್ರಿಸಬಹುದಾಗಿದೆ ಎಂದು ಎವಿಐಸಿ ತಂತ್ರಜ್ಞಾನ ನಿರ್ದೇಶಕ ಫಾಂಗ್‌ ಯೊಂಗ್‌ಹಾಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.