ADVERTISEMENT

ತೈವಾನ್‌ ಸುತ್ತಮುತ್ತ ಸಮರಾಭ್ಯಾಸಕ್ಕೆ ಚೀನಾ ನಿರ್ಧಾರ

ರಾಯಿಟರ್ಸ್
Published 14 ಜುಲೈ 2023, 14:00 IST
Last Updated 14 ಜುಲೈ 2023, 14:00 IST
.
.   

ತೈಪೆ : ಚೀನಾದ ದಿಗ್ಬಂಧನ ಉಲ್ಲಂಘಿಸಿ ತೈವಾನ್‌ ಈ ತಿಂಗಳ ಅಂತ್ಯದಲ್ಲಿ ವಾರ್ಷಿಕ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸಿರುವ ನಡುವೆಯೇ, ಈ ವಾರ ತೈವಾನ್‌ ಸುತ್ತಮುತ್ತ ಜಂಟಿ ಪಡೆಗಳ ತಾಲೀಮು ನಡೆಸಲು ಚೀನಾ ನಿರ್ಧರಿಸಿದೆ.

ತೈವಾನ್‌ ತನ್ನದೆಂದು ಭಾವಿಸಿರುವ ಚೀನಾ, ತೈವಾನ್‌ ಮೇಲೆ ಒತ್ತಡ ಹೇರಲು ಕಳೆದ ಮೂರು ವರ್ಷಗಳಿಂದಲೂ ದ್ವೀಪರಾಷ್ಟ್ರದ ಸುತ್ತಮತ್ತ ತಾಲೀಮು ನಡೆಸುತ್ತಿದೆ.  ಚೀನಾ, ಮಂಗಳವಾರದಿಂದ ಹಲವು ಯುದ್ಧವಿಮಾನಗಳು, ಬಾಂಬರ್‌ಗಳು, ಡ್ರೋನ್‌ಗಳು ಸೇರಿದಂತೆ ಮತ್ತಿತರ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳನ್ನು ದಕ್ಷಿಣ ತೈವಾನ್‌ನತ್ತ ಕಳುಹಿಸುತ್ತಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ತಿಳಿಸಿದೆ.

 ತೈವಾನ್‌ ಭದ್ರಾತಾ ಅಧಿಕಾರಿಗಳು ಇದನ್ನು ‘ಕಿರುಕುಳ’ ಎಂದು ಕರೆದಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ ‘ದೇಶದ ಸಾರ್ವಭೌಮತೆ ಮತ್ತು ಗಡಿಯ ಸಮಗ್ರತೆ ಎತ್ತಿಹಿಡಿಯುವ ದೃಢನಿಶ್ಚಯದಿಂದ ಚೀನಾದ ಪ್ರಜೆಗಳು ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.