
ಬೀಜಿಂಗ್: ವುಟಿಪ್ ಚಂಡಮಾರುತದ ಹೊಡೆತದಿಂದ ತತ್ತರಿಸಿದ್ದ ದಕ್ಷಿಣ ಚೀನಾದಲ್ಲಿ ಎರಡು ವಾರಗಳ ಒಳಗೆ ಮತ್ತೆ ಮಳೆ, ಗಾಳಿ ಅಬ್ಬರಿಸುತ್ತಿದೆ. ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಹಲವೆಡೆ ಭೂಕುಸಿತಗಳು ಸಂಭವಿಸಿವೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ಬುಧವಾರ ಆನ್‌ಲೈನ್ ಬುಲೆಟಿನ್‌ನಲ್ಲಿ ತಿಳಿಸಿದೆ.
ಅತಿಹೆಚ್ಚು ಜನಸಂಖ್ಯೆ ಇರುವ ಗೌಂಗ್‌ಡಾಂಗ್ ಮತ್ತು ಹುನಾನ್ ಸೇರಿ ಹಲವೆಡೆ ಮನೆಗಳು ಮುಳುಗಡೆಯಾಗಿದ್ದು, ಭೀಕರ ಪ್ರವಾಹ ಸ್ಥಿತಿ ತಲೆದೂರಿದೆ. ವುಟಿಪ್ ಚಂಡಮಾರುತ ಅಪ್ಪಳಿಸಿದ್ದ ವೇಳೆ ಜೂನ್ 13–25ರವರೆಗೆ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು, ಹೀಗಿದ್ದೂ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗೈಝೌ ಪ್ರದೇಶದಲ್ಲಿ ಬುಧವಾರ ತೀವ್ರ ಪ್ರಮಾಣದಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಈ ಪ್ರದೇಶದಲ್ಲಿ ಸುಮಾರು 30 ಸಾವಿರ ಜನ ವಾಸವಿದ್ದಾರೆ. ಕಟ್ಟಡಗಳು, ಕಾರುಗಳು ನೀರಿನಲ್ಲಿ ಮುಳುಗಿರುವ ವಿಡಿಯೊಗಳನ್ನು ಸುದ್ದಿ ಸಂಸ್ಥೆ ರಾಯಿಟರ್ಸ್ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.