ADVERTISEMENT

ಕೋವಿಡ್–19: ಒಟ್ಟು 2 ಕೋಟಿ ಜನರಿರುವ ಚೀನಾದ 3 ನಗರಗಳು ಲಾಕ್‌ಡೌನ್

ಪಿಟಿಐ
Published 11 ಜನವರಿ 2022, 6:19 IST
Last Updated 11 ಜನವರಿ 2022, 6:19 IST
   

ಬೀಜಿಂಗ್: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾವು ತನ್ನ ಮೂರನೇ ನಗರವನ್ನು ಲಾಕ್‌ಡೌನ್ ಮಾಡಿದೆ. ಈ ಮೂಲಕ ಚೀನಾದಲ್ಲಿ ಮೂರು ನಗರಗಳಿಂದ ಒಟ್ಟು 2 ಕೋಟಿಯಷ್ಟು ಜನರನ್ನು ಲಾಕ್ ಮಾಡಲಾಗಿದೆ.

ಸುಮಾರು 55 ಲಕ್ಷ ಜನರು ವಾಸಿಸುತ್ತಿರುವ ಅನ್ಯಾಂಗ್ ನಗರಕ್ಕೆ ಹೊಸದಾಗಿ ಲಾಕ್‌ಡೌನ್ ವಿಧಿಸಲಾಗಿದ್ದು, ಎಷ್ಟು ಸಮಯದವರೆಗೆ ಇರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಸಾಮೂಹಿಕ ಪರೀಕ್ಷೆಯನ್ನು ಸುಲಭಗೊಳಿಸಲು ಲಾಕ್‌ಡೌನ್ ಮಾಡಲಾಗುತ್ತಿದೆ ಎಂದು ಪ್ರಕಟಣೆಯೊಂದು ಹೇಳಿದೆ. ಆದರೆ, ಪರೀಕ್ಷೆಯು ಪೂರ್ಣಗೊಂಡಾಗ ಲಾಕ್‌ಡೌನ್ ಕೊನೆಗೊಳ್ಳುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿಲ್ಲ.

ಇನ್ನೂ 1.3 ಕೋಟಿ ಜನರನ್ನು ಷಿಯಾನ್ ನಗರದಲ್ಲಿ ಮತ್ತು 11 ಲಕ್ಷ ಜನರನ್ನು ಯುಝೌನಲ್ಲಿ ಲಾಕ್ ಮಾಡಲಾಗಿದೆ.

ADVERTISEMENT

ಚೀನಾದಲ್ಲಿ ಈವರೆಗೆ 1.34 ಲಕ್ಷಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.