ADVERTISEMENT

ಕೋವಿಡ್‌ ಸೋಂಕು ಹೆಚ್ಚಳ: ಚೀನಾದ ಚೆಂಗ್ಡುನಲ್ಲಿ ಕಠಿಣ ಲಾಕ್‌ಡೌನ್‌

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮ

ಏಜೆನ್ಸೀಸ್
Published 1 ಸೆಪ್ಟೆಂಬರ್ 2022, 18:14 IST
Last Updated 1 ಸೆಪ್ಟೆಂಬರ್ 2022, 18:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌:ಕೋವಿಡ್‌ ಸೋಂಕು ಹೆಚ್ಚಾಗುತ್ತಿರುವ ಕಾರಣ ಎರಡು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಚೆಂಗ್ಡು ನಗರದಲ್ಲಿ ಚೀನಾದ ಅಧಿಕಾರಿಗಳು ಕಠಿಣ ಲಾಕ್‌ಡೌನ್‌ ಜಾರಿಗೊಳಿಸಿದ್ದಾರೆ.

ಇಲ್ಲಿನ ನಿವಾಸಿಗಳಿಗೆ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ನಗರದಿಂದ ಹೋಗುವ ಮತ್ತು ಇಲ್ಲಿಗೆ ಬರುವ ಶೇ 70ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶಾಲೆಗಳ ಮರು ಆರಂಭವನ್ನು ಮುಂದೂಡಲಾಗಿದೆ. ಆದರೆ, ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

24 ಗಂಟೆಗೆ ಮುನ್ನ ಕೋವಿಡ್‌ ಪರೀಕ್ಷೆಗೆ ಒಳಗಾಗಿ ನೆಗೆಟಿವ್‌ ವರದಿ ಹೊಂದಿರುವ ಕುಟುಂಬದ ಒಬ್ಬ ವ್ಯಕ್ತಿಗೆ ಮಾತ್ರ ದಿನಕ್ಕೆ ಒಮ್ಮೆ ಅಷ್ಟೇ ಮನೆಯಿಂದ ಹೊರಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.

ADVERTISEMENT

ಚೆಂಗ್ಡುನಲ್ಲಿ ಇತ್ತೀಚೆಗೆ ಸುಮಾರು 1000 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಚೀನಾ ಖಂಡನೆ
ಬೀಜಿಂಗ್ (ಎಪಿ)
: ಚೀನಾದ ಪಶ್ಚಿಮ ಷಿನ್‌ಜಿಯಾಂಗ್ ಮತ್ತಿತರ ಪ್ರದೇಶಗಳಲ್ಲಿ ಉಯಿಗರ್‌ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದವರ ಬಂಧನ ಮಾನವೀಯತೆಗೆ ವಿರುದ್ಧ ವಾದುದು ಎಂಬ ವಿಶ್ವಸಂಸ್ಥೆಯ ವರದಿಯನ್ನು ಚೀನಾ ಬಲವಾಗಿ ಖಂಡಿಸಿದೆ.

ಬುಧವಾರ ತಡರಾತ್ರಿ ಜಿನಿವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಯೋ ತ್ಪಾದನೆ ವಿರೋಧಿ ಮತ್ತು ತೀವ್ರವಾದಿ ವಿರೋಧಿ ನೀತಿಗಳ ಮೂಲಕ ಚೀನಾ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.