
ಪಿಟಿಐ
ಬೀಜಿಂಗ್: ‘ವಿರಳ ಲೋಹಗಳನ್ನು ರಫ್ತು ಮಾಡಲು ಕಠಿಣ ನಿರ್ಬಂಧ ವಿಧಿಸಿರುವುದಕ್ಕೂ, ಪಾಕಿಸ್ತಾನದ ನಾಯಕರು ವಿರಳ ಲೋಹಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆ ನೀಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಚೀನಾ ತಿಳಿಸಿದೆ.
‘ಪಾಕಿಸ್ತಾನವು ಅಮೆರಿಕದ ಜೊತೆಗೆ ನಿಕಟ ಸಂಬಂಧ ಹೊಂದಲು ಬಯಸಿದರೂ, ಆ ದೇಶದ ಜೊತೆಗೆ ಚೀನಾದ ಸಂಬಂಧವೂ ಗಟ್ಟಿಯಾಗಿ ಉಳಿಯಲಿದೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿ– ಆನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.