ಬೀಜಿಂಗ್: ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಉತ್ತರ ಕೊರಿಯಾ ಜತೆಗಿನ ರೈಲು ಸರಕು ಸಾಗಣೆ ಸಂಬಂಧವನ್ನು ಚೀನಾ ಸೋಮವಾರದಿಂದ ಪುನರಾರಂಭಿಸಿದೆ.
ಚೀನಾದ ಡಾನ್‌ಡಂಗ್ ಮತ್ತು ಉತ್ತರ ಕೊರಿಯಾದ ಸಿನುಜು ನಡುವೆ ಹರಿಯುವ ಯಲೆ ನದಿಯ ಮೇಲೆ ಅಳವಡಿಸಲಾಗಿರುವ ರೈಲು ಸೇತುವೆಯ ಮೂಲಕ ಈ ಸರಕು ಸಾಗಣೆ ರೈಲು ಸಂಚಾರ ಪುನರಾರಂಭಿಸಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದು, ಇನ್ನಷ್ಟು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ವಿಶ್ವಸಂಸ್ಥೆ ಮತ್ತು ಅಮೆರಿಕವು ಈಗಾಗಲೇ ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿದ್ದು, ಸದ್ಯ ಚೀನಾದಿಂದ ಮಾತ್ರ ಅದಕ್ಕೆ ಆರ್ಥಿಕ ಸಹಕಾರ ಸಿಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.