ADVERTISEMENT

ಚೀನಾ: ಕೋವಿಡ್ ಉಲ್ಬಣಗೊಳ್ಳುತ್ತಿರುವ ನಡುವೆ ಒಂದೇ ದಿನ 100 ಹೊಸ ಪ್ರಕರಣಗಳು

ಪಿಟಿಐ
Published 3 ನವೆಂಬರ್ 2021, 5:59 IST
Last Updated 3 ನವೆಂಬರ್ 2021, 5:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್: ಬೀಜಿಂಗ್‌ನಲ್ಲಿ ಒಂಬತ್ತಕ್ಕೂ ಹೆಚ್ಚು ಪ್ರಕರಣಗಳು ಸೇರಿದಂತೆಚೀನಾದಲ್ಲಿ ಬುಧವಾರ ಒಂದೇ ದಿನ 100 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ನಗರದ ನಿವಾಸಿಗಳು ದೇಶದ ಬೇರೆ ಬೇರೆ ಭಾಗಗಳಿಗೆ ಪ್ರಯಾಣಿಸದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ದೇಶದಲ್ಲಿ 93 ಸ್ಥಳೀಯರಿಗೆ ಹಾಗೂ16 ಮಂದಿ ವಿದೇಶದಿಂದ ಬಂದವರಿಗೆ ಮಂಗಳವಾರ ಸೋಂಕು ದೃಢಪಟ್ಟಿತ್ತು. ಇದು ಇತ್ತೀಚೆಗಿನ ವಾರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾದ ದಿನವಾಗಿದೆ.

ರಷ್ಯಾದ ಗಡಿಯಲ್ಲಿರುವ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ 35, ಹೆಬೈನಲ್ಲಿ 14, ಗನ್ಸುದಲ್ಲಿ 14, ಬೀಜಿಂಗ್‌ನಲ್ಲಿ ಒಂಬತ್ತು, ಇನ್ನರ್ ಮಂಗೋಲಿಯಾದಲ್ಲಿ ಆರು, ಚಾಂಗ್‌ಕಿಂಗ್ ಮತ್ತು ಕಿಂಗ್‌ಹೈನಲ್ಲಿ ತಲಾ ನಾಲ್ಕು, ಜಿಯಾಂಗ್‌ಕ್ಸಿ, ಯುನ್ನಾನ್ ಮತ್ತು ನಿಂಗ್‌ಕ್ಸಿಯಾದಲ್ಲಿ ತಲಾ ಎರಡು ಮತ್ತು ಸಿಚುವಾನ್‌ನಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.