ಬೀಜಿಂಗ್: ಪ್ಯಾಲೆಸ್ಟೀನ್‌ನ ವಿರೋಧಿ ಗುಂಪುಗಳಾದ ಹಮಾಸ್ ಮತ್ತು ಫತಾ ಪ್ರತಿನಿಧಿಗಳು ಬೀಜಿಂಗ್‌ನಲ್ಲಿ ಈಚೆಗೆ ಸಭೆ ಸೇರಿ, ‘ಪ್ಯಾಲೆಸ್ಟೀನ್‌ನ ಒಳಗೆ ಹೊಂದಾಣಿಕೆಯನ್ನು ಹೆಚ್ಚಿಸುವ ಅಗತ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದಾರೆ’ ಎಂದು ಚೀನಾ ಹೇಳಿದೆ.
‘ಪ್ಯಾಲೆಸ್ಟೀನ್ ನ್ಯಾಷನಲ್ ಲಿಬರೇಷನ್ ಮೂಮೆಂಟ್ ಮತ್ತು ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂಮೆಂಟ್‌ನ ಪ್ರತಿನಿಧಿಗಳು ಈಚೆಗೆ ಬೀಜಿಂಗ್‌ಗೆ ಬಂದಿದ್ದರು. ಎರಡೂ ಕಡೆಯವರು ಮಾತುಕತೆ ಮೂಲಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಒಲವು ಇರುವುದಾಗಿ ತಿಳಿಸಿದರು, ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದು ಸಕಾರಾತ್ಮಕ ಪ್ರಗತಿ ಸಾಧಿಸಿದರು’ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ. ಸಭೆಯು ಯಾವಾಗ ನಡೆದಿದೆ ಎಂಬುದನ್ನು ಅವರು ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.