ADVERTISEMENT

ವದಂತಿ ಹಬ್ಬಿಸುತ್ತಿದ್ದ ಆರೋಪ: 34 ಸಾವಿರ ಆನ್‌ಲೈನ್‌ ಖಾತೆ ಬಂದ್‌ ಮಾಡಿದ ಚೀನಾ

ಏಜೆನ್ಸೀಸ್
Published 22 ಡಿಸೆಂಬರ್ 2023, 16:04 IST
Last Updated 22 ಡಿಸೆಂಬರ್ 2023, 16:04 IST
ಚೀನಾ
ಚೀನಾ   

ಶಾಂಘೈ: ವದಂತಿ ಹಬ್ಬಿಸುತ್ತಿದ್ದ ಆರೋಪದ ಮೇಲೆ ಚೀನಾದಲ್ಲಿ ಪೊಲೀಸರು 34 ಸಾವಿರ ಆನ್‌ಲೈನ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದು, 6,300 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಸುಳ್ಳು ಮಾಹಿತಿ ಹಂಚುವ ಖಾತೆಗಳನ್ನು ನಿರ್ಬಂಧಿಸುವ ಕಾರ್ಯಾಚರಣೆಯನ್ನು ಚೀನಾ ಕಳೆದ ಏಪ್ರಿಲ್‌ನಲ್ಲಿ ಆರಂಭಿಸಿತ್ತು.  

ಚೀನಿ ಇಂಟರ್‌ನೆಟ್‌ ಅನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಕಠಿಣ ನಿಬಂಧನೆಗಳೊಂದಿಗೆ ನಿಯಂತ್ರಿಸುತ್ತಿದೆ. ಸಾಮಾಜಿಕ ಸ್ಥಿರತೆ ಕಾಪಾಡುವ ನೆಪದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್‌ ಹೇರಿರುವ ಚೀನಾ, ನಕಾರಾತ್ಮಕ ವರದಿ, ವಿಮರ್ಶೆಗಳನ್ನು ನಿಗ್ರಹಿಸುತ್ತಿದೆ. 

ADVERTISEMENT

ಪೊಲೀಸ್‌ ಇಲಾಖೆ, ಸಾಂಕ್ರಾಮಿಕ ರೋಗಗಳು, ಅಪಾಯ ಮತ್ತು ವಿಪತ್ತಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡುವಂಥ ಅಕ್ರಮ, ಅಪರಾಧ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ‘ಸಿಸಿಟಿವಿ’ ಶುಕ್ರವಾರ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.