ADVERTISEMENT

ಉಪಗ್ರಹ ಉಡಾವಣೆ: ಕಕ್ಷೆ ಸೇರಲು ವಿಫಲವಾದ ಚೀನಾದ ರಾಕೆಟ್

ಏಜೆನ್ಸೀಸ್
Published 12 ಸೆಪ್ಟೆಂಬರ್ 2020, 12:49 IST
Last Updated 12 ಸೆಪ್ಟೆಂಬರ್ 2020, 12:49 IST
   

ಬೀಜಿಂಗ್‌: ‌ಬೆಳಕಿನ ದೂರ ಸಂವೇದಿ (ಆಪ್ಟಿಕಲ್ ರಿಮೋಟ್ ಸೆನ್ಸಿಂಗ್) ಉಪಗ್ರಹ ಜಿಲಿನ್ -1 ಗೌಫೆನ್–02ಸಿ ಅನ್ನುಹೊತ್ತು ಸಾಗಿದ್ದ ಕುವಾಯಿಝೌ–1ಎ ರಾಕೆಟ್‌ ಕಕ್ಷೆಗೆ ಸೇರಲು ವಿಫಲವಾಗಿದೆಎಂದು ವರದಿಯಾಗಿದೆ.

ವಾಯುವ್ಯ ಚೀನಾದಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 1.02ರ ವೇಳೆಗೆ ಉಡಾವಣೆ ಮಾಡಲಾಗಿತ್ತು.

ಹಾರಾಟದ ವೇಳೆ ರಾಕೆಟ್‌ನ ಕಾರ್ಯಕ್ಷಮತೆಯು ಅಸಹಜವಾಗಿತ್ತು ಎಂದು ಉಡಾವಣಾ ಕೇಂದ್ರ ಮಾಹಿತಿ ನೀಡಿದೆ. ಆದರೆ, ವೈಫಲ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.