ADVERTISEMENT

ಗಡಿಯಲ್ಲಿ ಚೀನಾದ ಸೇನಾ ಕವಾಯತು

ಪಿಟಿಐ
Published 6 ಜನವರಿ 2020, 18:02 IST
Last Updated 6 ಜನವರಿ 2020, 18:02 IST

ಬೀಜಿಂಗ್‌ : ಭಾರತದ ಗಡಿ ಸಮೀಪದಲ್ಲಿಯೇ ಚೀನಾದ ಸೇನಾ ಪಡೆಗಳು ಕವಾಯತು ನಡೆಸಿವೆ. ಅತ್ಯಾಧುನಿಕ ಸೇನಾ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಈ ಮಿಲಿಟರಿ ಅಭ್ಯಾಸದಲ್ಲಿ ಬಳಸಲಾಗಿದ್ದು, ಇದರಲ್ಲಿ ನೂತನ ‘15 ಲೈಟ್‌ ಬ್ಯಾಟಲ್‌ ಟ್ಯಾಂಕ್‌’, 155 ಎಂಎಂ ಫಿರಂಗಿ ವಾಹನವೂ ಸೇರಿತ್ತು ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಹೊಸ ವರ್ಷದ ನಿಮಿತ್ತ ‘ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)’ ಟಿಬೆಟ್ ಪ್ರಾಂತ್ಯದ ರಾಜಧಾನಿ ಲಾಸಾ ಸಮೀಪ 4,000 ಮೀ ಎತ್ತರ ಭೂಭಾಗದಲ್ಲಿ ಅಭ್ಯಾಸ ನಡೆಸಿದೆ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ ಎಂದು ಅದು ಹೇಳಿದೆ.

ಭಾರತ– ಚೀನಾದ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) 3,448 ಕಿ.ಮೀ ಇದ್ದು, ಅರುಣಾಚಲಪ್ರದೇಶ, ಸಿಕ್ಕಿಂ ರಾಜ್ಯಗಳೂ ಗಡಿ ಹಂಚಿಕೊಂಡಿವೆ. ಇವುಗಳಲ್ಲಿ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ ಎಂದು ಚೀನಾ ಕರೆಯುತ್ತಲಿದ್ದು, ಇದು ತನಗೇ ಸೇರಬೇಕು ಎಂದು ವಾದಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.