ADVERTISEMENT

ಮುಂದಿನ ವರ್ಷ ಚಂದ್ರಯಾನಕ್ಕೆ ಚೀನಾ ಸಿದ್ಧತೆ

ಪಿಟಿಐ
Published 2 ಅಕ್ಟೋಬರ್ 2023, 16:27 IST
Last Updated 2 ಅಕ್ಟೋಬರ್ 2023, 16:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀಜಿಂಗ್‌: ಚೀನಾವು ಮತ್ತೊಮ್ಮೆ ಚಂದ್ರಯಾನಕ್ಕೆ ಸಿದ್ಧತೆ ನಡೆಸಿದ್ದು, ಈ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಸರ್ಕಾರಿ ಸ್ವಾಮ್ಯದ ನ್ಯೂಸ್‌ ಏಜೆನ್ಸಿ ಕ್ಸಿನ್ಹುವಾ ವರದಿ ಮಾಡಿದೆ.

ಮುಂದಿನ ವರ್ಷ ‘ಚಾಂಗ್‌–6’ ಹೆಸರಿನ ಈ ಚಂದ್ರಯಾನಕ್ಕೆ ಮುಹೂರ್ತ ನಿಗದಿಯಾಗಿದ್ದು, ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿಪಡಿಸಿದ ಪೇಲೋಡ್‌ವೊಂದನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ (ಸಿಎನ್‌ಎಸ್‌ಎ) ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.

ADVERTISEMENT

ಚಂದ್ರನ ದಕ್ಷಿಣ ಧ್ರುವದಲ್ಲಿರುವ ತಗ್ಗು ಪ್ರದೇಶದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಿ ಅಧ್ಯಯನ ನಡೆಸುವುದು ಚೀನಾದ ಉದ್ದೇಶವಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ವೃದ್ಧಿಸಿಕೊಳ್ಳುವ ಭಾಗವಾಗಿ ಚೀನಾವು ಈ ಯೋಜನೆಯಡಿ ಫ್ರಾನ್ಸ್‌, ಇಟಲಿಯಿಂದ ನಿರ್ಮಿಸಿರುವ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುತ್ತಿದೆ. ಹಾಗಾಗಿ, ಪಾಕ್‌ ಅಭಿವೃದ್ಧಿಪಡಿಸಿದ ಕ್ಯೂಬ್ ಸ್ಯಾಟ್ ಉಪಕರಣವನ್ನು ಹೊತ್ತೊಯ್ಯಲಿದೆ ಎಂದು ಸಿಎನ್‌ಎಸ್‌ಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.