ADVERTISEMENT

ಪಶ್ಚಿಮ ಚೀನಾದಲ್ಲಿ ಮುಸ್ಲಿಮ್‌ ಮಹಿಳೆಯರಿಗೆ ಸಾಮೂಹಿಕ ಗರ್ಭಪಾತ: ಅಮೆರಿಕ ಆರೋಪ

ಏಜೆನ್ಸೀಸ್
Published 18 ಜುಲೈ 2020, 5:06 IST
Last Updated 18 ಜುಲೈ 2020, 5:06 IST
ಅಮೆರಿಕ ಕಾರ್ಯದರ್ಶಿ ಮೈಕ್‌ ಪಾಂಪಿಯೊ
ಅಮೆರಿಕ ಕಾರ್ಯದರ್ಶಿ ಮೈಕ್‌ ಪಾಂಪಿಯೊ    

ಲೋವಾ (ಅಮೆರಿಕ): ಪಶ್ಚಿಮ ಚೀನಾದಲ್ಲಿ ಮುಸ್ಲಿಮ್‌ ಮಹಿಳೆಯರಿಗೆ ಸಾಮೂಹಿಕ ಗರ್ಭಪಾತ ಮತ್ತು ಸಂತಾನಹರಣಕ್ಕೆ ಚೀನಾ ಒತ್ತಾಯಿಸುತ್ತಿದೆ ಎಂಬ ವರದಿಗಳನ್ನು ನಾನು ಓದಿದ್ದೇನೆ. ಇದು ಮಾನವ ಹಕ್ಕುಗಳ ಬಹುದೊಡ್ಡ ಉಲ್ಲಂಘನೆ ಎಂದು ಅಮೆರಿಕ ಸರ್ಕಾರದ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

ಶುಕ್ರವಾರ ಲೋವಾಕ್ಕೆ ಭೇಟಿ ನೀಡಿದ್ದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. "ಚೀನಾದ ಕಮ್ಯುನಿಸ್ಟ್ ಪಕ್ಷವು ಪಶ್ಚಿಮ ಚೀನಾದಲ್ಲಿ ಮುಸ್ಲಿಮರ ಮೇಲೆ ಸಾಮೂಹಿಕ ಗರ್ಭಪಾತ ಮತ್ತು ಸಂತಾನಹರಣವನ್ನು ಒತ್ತಾಯ ಪೂರ್ವಕವಾಗಿ ಹೇರುತ್ತಿದೆ. ಈ ಬಗ್ಗೆ ಕೆಲವು ವಾರಗಳ ಹಿಂದೆ ವರದಿಯನ್ನು ನಾನು ಓದಿದ್ದೇನೆ. ಇದು ನಾವು ನೋಡಿದ ಅತ್ಯಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ,’ಎಂದಿದ್ದಾರೆ ಪಾಂಪಿಯೊ.

ಚೀನೀ ಕಮ್ಯುನಿಸ್ಟ್ ಪಕ್ಷವು ಹಾಂಗ್ ಕಾಂಗ್‌ನ ಸ್ವಾತಂತ್ರ್ಯವನ್ನು ಮಾತ್ರ ಕಸಿಯುತ್ತಿಲ್ಲ. ಸ್ವತಂತ್ರ ತೈವಾನ್‌ ಅನ್ನು ಬೆದರಿಸುತ್ತಿದೆ. ಅಲ್ಲದೆ, ಜಾಗತಿಕ ಸಂವಹನ ಜಾಲಗಳಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಮಾದಕವಸ್ತು ನಿಯಂತ್ರಣಾ ಕಾಯ್ದೆ ಅಡಿಯಲ್ಲಿ ಶುಕ್ರವಾರ ಅಮೆರಿಕಐವರು ಚೀನೀ ಪ್ರಜೆಗಳನ್ನು ಬಂದಿಸಿದೆ. ಇದೇ ಕಾಯ್ಡೆ ಅಡಿ ಚೀನಾದ ಎರಡು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಾಗತಿಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವವರಿಗೆಮಾಹಿತಿ ಪೂರೈಸುತ್ತಿದ್ದ ‘ಹವಾಯಿ’ ಸೇರಿದಂತೆ ಚೀನಾದ ಕೆಲ ತಂತ್ರಜ್ಞಾನ ಕಂಪನಿಗಳ ಉದ್ಯೋಗಿಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದೆ. ಜೊತೆಗೆ ವೀಸಾ ರದ್ದು ಮಾಡಿದೆ.

ನಿರ್ಬಂಧದ ಕುರಿತು ಬುಧವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಪಾಂಪಿಯೊ, ‘ಮಾನವ ಹಕ್ಕು ಉಲ್ಲಂಘಿಸುವವರೊಂದಿಗೆ ವ್ಯಾಪಾರ ಮಾಡುತ್ತಿರುವವರು ನಿರ್ಬಂಧದ ಈ ನೋಟಿಸ್‌ ಅನ್ನು ತಮ್ಮ ಗಮನಕ್ಕೆ ತೆಗೆದುಕೊಳ್ಳಬೇಕು,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.