ADVERTISEMENT

ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ

ಪಿಟಿಐ
Published 14 ಜುಲೈ 2025, 2:47 IST
Last Updated 14 ಜುಲೈ 2025, 2:47 IST
   

ತೈಪೆ: ತೈವಾನ್ ಭೂಪ್ರದೇಶದ ಅತಿಕ್ರಮಣವನ್ನು ಚೀನಾ ಮುಂದುವರಿಸಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ (ಸ್ಥಳೀಯ ಸಮಯ) ತೈವಾನ್‌ನ ಸುತ್ತಲೂ ಚೀನಾದ 17 ಮಿಲಿಟರಿ ವಿಮಾನಗಳು, ನೌಕಾ ಹಡಗುಗಳನ್ನು ಪತ್ತೆಹಚ್ಚಿರುವುದಾಗಿ ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ (ಎಂಎನ್‌ಡಿ) ತಿಳಿಸಿದೆ.

ಸಚಿವಾಲಯದ ಪ್ರಕಾರ, 17 ವಿಮಾನಗಳ ಪೈಕಿ 7 ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ಉತ್ತರ, ನೈರುತ್ಯ ಮತ್ತು ಪೂರ್ವ ವಾಯು ರಕ್ಷಣಾ ಗುರುತಿನ ವಲಯವನ್ನು ಪ್ರವೇಶಿಸಿದ್ದವು.

ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯಿಸಲು, ತೈವಾನ್‌ನ ಸಶಸ್ತ್ರ ಪಡೆಗಳು ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದ್ದವು.

ADVERTISEMENT

ಚೀನಾ ರಾಷ್ಟ್ರದ ಮಹಾನ್ ಪುನಶ್ಚೇತನದ ನೀತಿಯ ಭಾಗವಾಗಿ ಮತ್ತು ಪಶ್ಚಿಮ ಪೆಸಿಫಿಕ್‌ನಲ್ಲಿ ಪ್ರಾಬಲ್ಯವನ್ನು ವಿಸ್ತರಿಸುವ ಮೂಲಕ ತೈವಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಚೀನಾ, ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳ ಮೂಲಕ ಅತಿಕ್ರಮಿಸುತ್ತಿದೆ ಎಂದು ಜೂನ್ 28 ರಂದು, ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.