ADVERTISEMENT

ಉಕ್ರೇನ್ ಸ್ಥಿತಿ ಬಗ್ಗೆ ಚೀನಾ ಕಳವಳ, ಶಾಂತಿ ಪುನರ್ ಸ್ಥಾಪನೆಗೆ ಸಹಕಾರ

ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಪುನರ್ ಸ್ಥಾಪನೆಗೆ ಸಹಕಾರ: ಚೀನಾ

ಪಿಟಿಐ
Published 11 ಮಾರ್ಚ್ 2022, 13:12 IST
Last Updated 11 ಮಾರ್ಚ್ 2022, 13:12 IST
ಲಿ ಕಿಕ್ವಿಯಾಂಗ್
ಲಿ ಕಿಕ್ವಿಯಾಂಗ್   

ಬೀಜಿಂಗ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ, ಶಾಂತಿ ಪುನರ್ ಸ್ಥಾಪನೆಗೆ ನೆರವಾಗುವ ನಿಟ್ಟಿನಲ್ಲಿ ಧನಾತ್ಮಕ ಪಾತ್ರ ವಹಿಸಿಕೊಳ್ಳುವುದಾಗಿ ಹೇಳಿದೆ. ಆದರೆ ರಷ್ಯಾ ಮೇಲೆ ಅಮೆರಿಕ ಮತ್ತು ಯುರೋಪ್ ದೇಶಗಳು ಹೇರಿರುವ ಆರ್ಥಿಕ ನಿರ್ಬಂಧಗಳನ್ನು ವಿರೋಧಿಸಿದೆ.

ರಷ್ಯಾ ಮೇಲಿನಅಮೆರಿಕ ಮತ್ತು ಯುರೋಪ್ ದೇಶಗಳ ನಿರ್ಬಂಧದಿಂದಾಗಿಈಗಾಗಲೇ ಕೊರೊನಾ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ವಿಶ್ವ ಆರ್ಥಿಕತೆಗೆ ದೊಡ್ಡ ಹಾನಿಯಾಗಲಿದೆ ಎಂದು ಚೀನಾ ಹೇಳಿದೆ.

ಚೀನಾ ಸಂಸತ್ತಿನ ವಾರ್ಷಿಕ ಅಧಿವೇಶನದ ಕೊನೆ ದಿನವಾದ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾದ ಪ್ರಧಾನಿ ಲಿ ಕಿಕ್ವಿಯಾಂಗ್ ಅವರು, ಉಕ್ರೇನ್‌ನಲ್ಲಿ ಸೃಷ್ಟಿಯಾದ ಮಾನವೀಯ ಬಿಕ್ಕಟ್ಟು ನಿಯಂತ್ರಣಕ್ಕಾಗಿ ತಟಸ್ಥ ನೀತಿ ಅನುಸರಿಸಬೇಕು ಎಂದು ಹೇಳಿದರು.

ADVERTISEMENT

ಇನ್ನು ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾವನ್ನು ಚೀನಾ ಟೀಕಿಸುತ್ತಿಲ್ಲ ಎಂಬ ಪ್ರಶ್ನೆಗೆ, ಈ ಎರಡೂ ದೇಶಗಳು ಶಾಂತಿ ಮಾತುಕತೆಗೆ ಮುಂದಾಗುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಶೀಘ್ರದಲ್ಲೇ ಉಕ್ರೇನ್‌ನಲ್ಲಿ ಶಾಂತಿ ಮರುಕಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ದೇಶದ ಸಾರ್ವಭೌಮತ್ವ ಮತ್ತು ಪ್ರಾಂತೀಯ ಸಮಗ್ರತೆಯನ್ನು ಗೌರವಿಸಬೇಕು. ದೇಶಗಳ ಭದ್ರತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಉಕ್ರೇನ್ ನ್ಯಾಟೊ ಒಕ್ಕೂಟದ ಭಾಗವಾಗಬಹುದು ಎಂಬ ರಷ್ಯಾದ ಕಳವಳವನ್ನು ಬೆಂಬಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.