ADVERTISEMENT

ರಷ್ಯಾಕ್ಕೆ ನಿರ್ಬಂಧ: ಅಮೆರಿಕಾ ವಿರುದ್ಧ ಜಿನ್‌ಪಿಂಗ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 13:19 IST
Last Updated 22 ಜೂನ್ 2022, 13:19 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್   

ಬೀಜಿಂಗ್‌: ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ವಿರುದ್ಧ ನಿರ್ಬಂಧ ಹೇರಿದ್ದಕ್ಕಾಗಿ ಅಮೆರಿಕ ಮತ್ತು ಯುರೋಪ್‌ ವಿರುದ್ಧ ವಾಗ್ದಾಳಿ ನಡೆಸಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್,ಉದ್ದೇಶಪೂರ್ವಕ ನಿರ್ಬಂಧ ಹೇರುವ ಕಾರ್ಯ ವಿಶ್ವದಾದ್ಯಂತ ಜನರಿಗೆ ಹಾನಿ ಮಾಡುತ್ತದೆ ಎಂದು ಹೇಳಿದರು.

ಪ್ರಾಬಲ್ಯ, ಗುಂಪು ರಾಜಕೀಯ ಮತ್ತು ಬಣಗಳ ಘರ್ಷಣೆಗಳು ಶಾಂತಿ ಅಥವಾ ಸ್ಥಿರತೆ ತರುವುದಿಲ್ಲ, ಬದಲಿಗೆ ಯುದ್ಧ ಮತ್ತು ಸಂಘರ್ಷ ತರುತ್ತವೆ ಎಂಬುದನ್ನು ಇತಿಹಾಸ ತೋರಿಸಿದೆ ಎಂದು ಬ್ರಿಕ್ಸ್ ವ್ಯಾಪಾರ ವೇದಿಕೆ ಉದ್ಘಾಟನಾ ಸಮಾರಂಭದ ಮುಖ್ಯ ಭಾಷಣದಲ್ಲಿ ಜಿನ್‌ಪಿಂಗ್ ತಿಳಿಸಿದರು.

ಉಕ್ರೇನ್ ಬಿಕ್ಕಟ್ಟು ಮತ್ತೊಮ್ಮೆ ಮಾನವೀಯತೆಗೆ ಎಚ್ಚರಿಕೆ ನೀಡಿದೆ. ದೇಶಗಳು ತಮ್ಮ ಭದ್ರತೆ ಕುರಿತು ಕುರುಡು ನಂಬಿಕೆ ಇರಿಸಿದರೆ, ಇತರರ ವೆಚ್ಚದಲ್ಲಿ ತಮ್ಮದೇ ಸುರಕ್ಷತೆ ಹುಡುಕಿದರೆ ಖಂಡಿತವಾಗಿಯೂ ಭದ್ರತಾ ಸಂಕಷ್ಟಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಜೀ ಉಲ್ಲೇಖಿಸಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಅಧ್ಯಕ್ಷ ಜಿ ಅವರು ಆಯೋಜಿಸಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್, ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಭಾಗವಹಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.