ಪಾಕಿಸ್ತಾನ ಧ್ವಜ
ಇಸ್ಲಮಾಬಾದ್ (ಪಿಟಿಐ): ‘ಭಾರತದ ಮೇಲೆ ನಡೆಸಿದ ನಾಲ್ಕು ದಿನಗಳ ಸೇನಾ ಸಂಘರ್ಷದ ವೇಳೆ ಚೀನಾದ ಶಸ್ತ್ರಾಸ್ತ್ರಗಳು ಅತ್ಯದ್ಬುತ ಕೆಲಸ ಮಾಡಿವೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹಮದ್ ಶರೀಫ್ ಹೇಳಿದ್ದಾರೆ.
ಶರೀಫ್ ಅವರನ್ನು ಬ್ಲೂಂಬರ್ಗ್ ಪತ್ರಿಕೆ ಸಂದರ್ಶಿಸಿತ್ತು. ಸಂದರ್ಶನದ ವರದಿಯನ್ನು ಪಾಕಿಸ್ತಾನದ ‘ದಿ ಡಾನ್’ ಪತ್ರಿಕೆ ಸೋಮವಾರ ಪ್ರಕಟಿಸಿದೆ. ‘ನಾವು ಎಲ್ಲ ರೀತಿಯ ತಂತ್ರಜ್ಞಾನಗಳಿಗೆ ತೆರೆದುಕೊಂಡಿದ್ದೇವೆ. ಇತ್ತೀಚೆಗೆ ಚೀನಾದ ಶಸ್ತ್ರಾಸ್ತ್ರಗಳು ಅತ್ಯುತ್ತಮವಾಗಿ ಕೆಲಸ ಮಾಡಿದ್ದವು’ ಎಂದಿದ್ದಾರೆ.
‘ಸಂಘರ್ಷದ ವೇಳೆ ಪಾಕಿಸ್ತಾನದ 12 ಸೇನಾ ವಿಮಾನಗಳು ನಾಶವಾಗಿವೆ’ ಎಂಬ ಭಾರತದ ವಾದವನ್ನು ಶರೀಫ್ ನಿರಾಕರಿಸಿದರು. ‘ಅಂಕಿ ಅಂಶದ ವಿಚಾರದಲ್ಲಿ ಆಟವಾಡಲು ನಾವು ಯಾವಾಗಲೂ ಯತ್ನಿಸಿಲ್ಲ’ ಎಂದಿದ್ದಾರೆ. ‘ಸಂಘರ್ಷದಲ್ಲಿ ಚೀನಾದ ಜೆ–10ಸಿ ಜೆಟ್‌ಗಳನ್ನು ಬಳಸಿಕೊಳ್ಳಲಾಗಿತ್ತು’ ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ಡಾರ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.