ADVERTISEMENT

ನೇಪಾಳದಲ್ಲಿ 6 ಜನರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2023, 6:25 IST
Last Updated 11 ಜುಲೈ 2023, 6:25 IST
ಹೆಲಿಕಾಪ್ಟರ್ (ಪ್ರಾತಿನಿಧಿಕ ಚಿತ್ರ)
ಹೆಲಿಕಾಪ್ಟರ್ (ಪ್ರಾತಿನಿಧಿಕ ಚಿತ್ರ)   

ಕಠ್ಮಂಡು: ಆರು ಜನರನ್ನು ಸೊಲುಖುಂಬುಗೆ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ.

ಬೆಳಗ್ಗೆ 10ಕ್ಕೆ ಕಠ್ಮಂಡುವಿನಿಂದ ಹೊರಟ ಹೆಲಿಕಾಪ್ಟರ್‌ ಕೇವಲ 12 ನಿಮಿಷ ಹಾರಾಟ ನಡೆಸಿದ ನಂತರ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ. ಕರೆ ಸಂಕೇತ 9ಎನ್‌ಎಂವಿಯಿಂದ ಯಾವುದೇ ಸಂಕೇತ ನಂತರ ಸಿಗಲಿಲ್ಲ ಎಂದು ಮಾಹಿತಿ ಅಧಿಕಾರಿ ಗ್ಯಾನೇಂದ್ರ ಭುಲ್ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ನಾಪತ್ತೆಯಾಗಿರುವ ಐದು ಜನ ಮೆಕ್ಸಿಕನ್ನರು ಎಂದು ರಾಯಿಟರ್ಸ್‌ ವರದಿ ಮಾಡಿದೆ. ಅಲ್ಲಿನ ಆಡಳಿತವು ಶೋಧ ಕಾರ್ಯಾಚರಣೆ ಆರಂಭಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.