ADVERTISEMENT

ತಾಪಮಾನ ಬದಲಾವಣೆ: ಕ್ರಮೇಣ ಬಿಸಿಲಿನ ತಾಪ 6 ಪಟ್ಟು ಏರಿಕೆ ಸಾಧ್ಯತೆ

ಪಿಟಿಐ
Published 9 ಆಗಸ್ಟ್ 2022, 11:24 IST
Last Updated 9 ಆಗಸ್ಟ್ 2022, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ತಾಪಮಾನ ಬದಲಾವಣೆಯ ಪರಿಣಾಮ ಶತಮಾನದಂತ್ಯಕ್ಕೆ ಬಿಸಿಲಿನ ತಾಪ ಆರು ಪಟ್ಟು ಹೆಚ್ಚಾಗಲಿದ್ದು, ಬಿಸಿಲಿನ ತಾಪದಿಂದಾಗಿ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಉತ್ತರ ಕರೊಲಿನಾವಿ. ವಿಯ ಸಂಶೋಧಕರು ಅಧ್ಯಯನ ನಡೆಸಿದ್ದು, ವರದಿ ಸ್ಥಳೀಯ ಲ್ಯಾನ್ಸೆಂಟ್ ಪ್ಲಾನೆಟರಿ ಹೆಲ್ತ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ‘ರಾತ್ರಿಯೂ ತಾಪಮಾನ ಹೆಚ್ಚಲಿದ್ದು, ನಿದ್ರೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಉಲ್ಲೇಖಿಸಿದೆ.

ನಿದ್ರೆಯ ಪ್ರಮಾಣ ಕಡಿಮೆ ಆಗುವುದು ದೇಹದ ನಿರೋಧಕ ಶಕ್ತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದಾಗಿ ಮಾನಸಿಕ ಆರೋಗ್ಯ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿ ಇತರೆ ಅನಾರೋಗ್ಯಗಳು ಕಾಡಬಹುದು ಎಂದೂ ವರದಿ ಎಚ್ಚರಿಸಿದೆ.

ADVERTISEMENT

ರಾತ್ರಿಯ ಅವಧಿಯಲ್ಲಿನ ತಾಪಮಾನ ಪ್ರಮಾಣವು 2090ರ ವೇಳೆಗೆ ಬಹುತೇಕ ದುಪ್ಪಟ್ಟಾಗಲಿದ್ದು, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್‌ನಿಂದ 39.7 ಡಿಗ್ರಿ ಸೆಲ್ಸಿಯಸ್‌ವರೆಗೂ ಇರಲಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

‘ರಾತ್ರಿಯ ಹೊತ್ತು ತಾಪಮಾನ ಪ್ರಮಾಣ ಹೆಚ್ಚುತ್ತಿರುವುದುನ್ನು ಈಗ ಕಡೆಗಣಿಸಲಾಗುತ್ತಿದೆ’ ಎಂದು ಅಧ್ಯಯನ ವರದಿಯ ಸಹ ಲೇಖಕ, ತಾಪಮಾನ ಪರಿಣತ ಯುಕಿಯಾಂಗ್ ಝಾಂಗ್ ಅವರು ಅಭಿಪ್ರಾಯಪಟ್ಟರು.

ಪ್ರತಿಕೂಲ ತಾಪಮಾನವು ಜನರ ಮೇಲೆ ಬೀರಲಿರುವ ಪರಿಣಾಮಗಳನ್ನು ಎದುರಿಸಲು ಅನುವಾಗುವಂತೆ ಜನರು ಪಾಲಿಸಬೇಕಾದ ಜೀವನಶೈಲಿ ಕ್ರಮಗಳನ್ನು ವಿನ್ಯಾಸಗೊಳಿಸುವುದು ಅಗತ್ಯವಾಗಿದೆ ಎಂದು ಝಾಂಗ್ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.