ADVERTISEMENT

ಕೊಲಂಬಿಯಾ: ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ– 11 ಸಾವು

ಏಜೆನ್ಸೀಸ್
Published 16 ಮಾರ್ಚ್ 2023, 12:15 IST
Last Updated 16 ಮಾರ್ಚ್ 2023, 12:15 IST
ಸ್ಫೋಟದಿಂದ ಗಣಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ಆಗಮಿಸಿದ ರಕ್ಷಣಾ ಪಡೆಗಳು –ಎಪಿ/ಪಿಟಿಐ ಚಿತ್ರ
ಸ್ಫೋಟದಿಂದ ಗಣಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ಆಗಮಿಸಿದ ರಕ್ಷಣಾ ಪಡೆಗಳು –ಎಪಿ/ಪಿಟಿಐ ಚಿತ್ರ   

ಬೊಗೊಟಾ: ‘ಮಧ್ಯ ಕೊಲಂಬಿಯಾದ ಕಲ್ಲಿದ್ದಲು ಗಣಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಸರ್ಕಾರ ಬುಧವಾರ ಹೇಳಿದೆ.

ಸುರಂಗಗಳ ಮೂಲಕ ಸಂಪರ್ಕ ಹೊಂದಿದ್ದ ಇತರ ನಾಲ್ಕು ಗಣಿಗಳ ಮೇಲೂ ಸ್ಫೋಟ ಪರಿಣಾಮ ಬೀರಿದೆ.

‘ಸ್ಫೋಟದಿಂದ ಗಣಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಪಡೆಗಳು ಶ್ರಮಿಸುತ್ತಿವೆ’ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ADVERTISEMENT

ಮಿಥೇನ್ ಅನಿಲದ ಶೇಖರಣೆಯೇ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.