ADVERTISEMENT

ಕಾಂಗೊ | ಮಗುಚಿದ ದೋಣಿ: 86 ಮಂದಿ ನೀರುಪಾಲು

ಏಜೆನ್ಸೀಸ್
Published 12 ಸೆಪ್ಟೆಂಬರ್ 2025, 14:36 IST
Last Updated 12 ಸೆಪ್ಟೆಂಬರ್ 2025, 14:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೀಣ್‌ಶಾಸ: ಕಾಂಗೊದ ವಾಯವ್ಯ ಭಾಗದಲ್ಲಿರುವ ಈಕ್ವೆಟರ್ ಪ್ರಾಂತ್ಯದಲ್ಲಿ ಯಾಂತ್ರಿಕ ದೋಣಿ ಮಗುಚಿದ ಪರಿಣಾಮ ಕನಿಷ್ಠ 86 ಜನರು ಸಾವಿಗೀಡಾಗಿದ್ದಾರೆ ಎಂದು ಇಲ್ಲಿನ ಸರ್ಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಬಸಾನ್‌ಕುಸು ಪ್ರದೇಶದಲ್ಲಿ ಈ ದುರಂತ ಘಟಿಸಿದೆ. ತಕ್ಷಣಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ದೋಣಿಯ ಸಾಮರ್ಥ್ಯ ಮೀರಿ ಜನರು ಪ್ರಯಾಣಿಸುತ್ತಿದ್ದುದು ಹಾಗೂ ರಾತ್ರಿ ವೇಳೆ ಸಂಚರಿಸುತ್ತಿದ್ದುದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.