ADVERTISEMENT

ರೈತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ: ಇಂಡಿಯನ್‌ ಕಾಕಸ್‌ ಆಗ್ರಹ

ಪಿಟಿಐ
Published 6 ಫೆಬ್ರುವರಿ 2021, 6:09 IST
Last Updated 6 ಫೆಬ್ರುವರಿ 2021, 6:09 IST
ರೋ ಖನ್ನಾ
ರೋ ಖನ್ನಾ   

ವಾಷಿಂಗ್ಟನ್‌: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಶಾಂತಿಯುತ ಪ್ರತಿಭಟನೆ ನಡೆಸಲು ಅನುವು ಮಾಡಿಕೊಡಬೇಕು. ಪ್ರತಿಭಟನಕಾರರಿಗೆ ಇಂಟರ್‌ನೆಟ್ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನಲ್‌ ಇಂಡಿಯಾ ಕಾಕಸ್‌ ಭಾರತವನ್ನು ಆಗ್ರಹಿಸಿದೆ.

ರೈತರ ಪ್ರತಿಭಟನೆ ವೇಳೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾಗದಂತೆಯೂ ನೊಡಿಕೊಳ್ಳಬೇಕು ಎಂದು ಕಾಕಸ್‌ನ ಸಹ ಚೇರಮನ್‌, ಸಂಸದರೂ ಆದ ಬ್ರ್ಯಾಡ್‌ ಶೇರ್ಮನ್ ಹೇಳಿದ್ದಾರೆ.

‘ಕಾಕಸ್‌ನ ಮತ್ತೊಬ್ಬ ಸಹಚೇರಮನ್‌ ಆಗಿರುವ ರಿಪಬ್ಲಿಕನ್‌ ಸಂಸದ ಸ್ವೀವ್‌ ಚಾಬೋಟ್‌ ಅವರೊಂದಿಗೆ ಈ ಕುರಿತು ಚರ್ಚಿಸಿದ್ದೇನೆ. ರೈತರ ಪ್ರತಿಭಟನೆ ಕುರಿತಂತೆ ಅಮೆರಿಕದಲ್ಲಿನ ಭಾರತದ ರಾಯಭಾರಿ ತರನ್‌ಜಿತ್‌ ಸಿಂಗ್‌ ಸಂಧು ಅವರೊಂದಿಗೆ ಮಾತುಕತೆ ನಡೆಸುವಂತೆ ಕಾಕಸ್‌ನ ವೈಸ್‌ಚೇರಮನ್‌ ಹಾಗೂ ಸಂಸದ ರೋ ಖನ್ನಾ ಅವರಿಗೆ ಸೂಚಿಸಿದ್ದೇನೆ’ ಎಂದು ಶೇರ್ಮನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.