ADVERTISEMENT

ಜರ್ಮನ್‌ ಸಂಸತ್ ಚುನಾವಣೆ: ಫ್ರಿಡ್‌ರಿಚ್‌ ಮೆರ್ಜ್ ಮುಂದಿನ ಚಾನ್ಸಲರ್?

ಏಜೆನ್ಸೀಸ್
Published 24 ಫೆಬ್ರುವರಿ 2025, 14:00 IST
Last Updated 24 ಫೆಬ್ರುವರಿ 2025, 14:00 IST
<div class="paragraphs"><p>ಫ್ರಿಡ್‌ರಿಚ್‌ ಮೆರ್ಜ್</p></div>

ಫ್ರಿಡ್‌ರಿಚ್‌ ಮೆರ್ಜ್

   

ಬರ್ಲಿನ್‌ : ಜರ್ಮನಿಯ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಫ್ರಿಡ್‌ರಿಚ್‌ ಮೆರ್ಜ್ ನೇತೃತ್ವದ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ, ಅವರೇ ಮುಂದಿನ ಚಾನ್ಸಲರ್ ಆಗುವುದು ಖಚಿತವಾಗಿದೆ.

ಜರ್ಮನಿಯ ಅರ್ಥವ್ಯವಸ್ಥೆ ಸ್ಥಿರಗೊಳಿಸಬೇಕು, ಅಕ್ರಮ ವಲಸಿಗರಿಗೆ ಕಡಿವಾಣ ಹಾಕಬೇಕೆಂಬ ವಿಚಾರವೇ ಚುನಾವಣಾ ಪ್ರಚಾರದಲ್ಲಿ ಪ್ರಾಮುಖ್ಯ ಪಡೆದಿದ್ದವು. ಕೆಲವು ವಾರಗಳಿಂದ ಈಚೆಗೆ ಈ ವಿಚಾರದಲ್ಲಿ ಮೆರ್ಜ್ ಅವರು ಕಠಿಣ ನಿಲುವು ಪ್ರದರ್ಶಿಸಿದ್ದರು.

ADVERTISEMENT

ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶದಲ್ಲಿ ಸೆಂಟರ್‌ ರೈಟ್‌ ಕ್ರಿಶ್ಚಿಯನ್‌ ಡೆಮಾಕ್ರಟಿಕ್‌ ಹಾಗೂ ಕನ್ಸರ್ವೇಟಿವ್‌ ಪೊಲಿಟಿಕಲ್‌ ಅಲಯನ್ಸ್‌ (ಸಿಡಿಯು–ಸಿಎಸ್‌ಯು) ಒಕ್ಕೂಟವು ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದಿವೆ. ಮೈತ್ರಿಕೂಟ ಮುನ್ನಡೆಸಿದ್ದ ಫ್ರಿಡ್‌ರಿಚ್‌ ಮೆರ್ಜ್ ಅವರೇ ದೇಶದ ಮುಂದಿನ ಚಾನ್ಸಲರ್ ಆಗಿ ಆಯ್ಕೆಯಾಗುವುದು ಖಚಿತವಾಗಿದೆ. ಈಸ್ಟರ್‌ ವೇಳೆಗೆ (ಏಪ್ರಿಲ್‌ 20) ನೂತನ ಸರ್ಕಾರ ರಚಿಸಲಾಗುವುದು ಎಂದು ಮತದಾನದ ದಿನವೇ ಮೆರ್ಜ್ ಘೋಷಿಸಿದ್ದರು.

ಜರ್ಮನಿ ಸಂಸತ್ತಿನ 630 ಕ್ಷೇತ್ರಗಳ ಪೈಕಿ ಮೆರ್ಜ್ ನೇತೃತ್ವದ ಸಿಡಿಯು–ಸಿಎಸ್‌ಯು ಒಕ್ಕೂಟವು 208 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದರೆ, ಅಲ್ಟರ್ನೇಟಿವ್‌ ಫಾರ್‌ ರೈಟ್‌ (ಎಎಫ್‌ಡಿ) 152ರಲ್ಲಿ ಗೆಲುವು ಪಡೆದುಕೊಂಡಿದೆ.

152 ಕ್ಷೇತ್ರಗಳಲ್ಲಿ ಗೆಲುವು ಪಡೆದಿರುವ ಎಎಫ್‌ಡಿ ಅತಿ ದೊಡ್ಡ ಪಕ್ಷವಾಗಿದ್ದರೂ, ಆ ಪಕ್ಷದ ಜೊತೆಗೆ ಮೈತ್ರಿ ಸಾಧ್ಯತೆಯನ್ನು ಮೆರ್ಜ್ ತಳ್ಳಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.