ADVERTISEMENT

2019ರ ನಂತರ ಭಾರತದೊಂದಿಗೆ ರಚನಾತ್ಮಕ ಮಾತುಕತೆ ಕಷ್ಟವಾಗಿದೆ: ಬಿಲಾವಲ್‌ ಭುಟ್ಟೊ

ಪಿಟಿಐ
Published 30 ಜುಲೈ 2022, 14:18 IST
Last Updated 30 ಜುಲೈ 2022, 14:18 IST
ಬಿಲ್ವಾಲಾ ಭುಟ್ಟೊ ಜರ್ದಾರಿ
ಬಿಲ್ವಾಲಾ ಭುಟ್ಟೊ ಜರ್ದಾರಿ    

ಇಸ್ಲಾಮಾಬಾದ್: 2019ರ ನಂತರ ಭಾರತದೊಂದಿಗೆ ರಚನಾತ್ಮಕ ಮಾತುಕತೆ ಕಷ್ಟವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ಭುಟ್ಟೊ ಜರ್ದಾರಿ ಹೇಳಿದ್ದಾರೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ತಾಶ್ಕೆಂಟ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ಎಸ್‌ಸಿಒ ಭಾಗ ಮತ್ತು ಎರಡೂ ದೇಶಗಳು ಸಂಘಟನೆಯ ಉದ್ದೇಶದ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಭಾರತ ಸರ್ಕಾರ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು2019ರಲ್ಲಿ ಹಿಂಪಡೆದು ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ನಂತರದಲ್ಲಿ ಭಾರತ– ಪಾಕಿಸ್ತಾನದೊಂದಿಗೆ ರಚನಾತ್ಮಕ ಮಾತುಕತೆ ನಡೆಯುತ್ತಿಲ್ಲ’ ಎಂದು ಹೇಳಿದರು.

ಸಭೆಯಲ್ಲಿ ಭಾರತ ವಿದೇಶಾಂಗ ಸಚಿವ ಎಸ್‌.ಜೈಶಂಕರ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತಿತರರು ಭಾಗಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.