ADVERTISEMENT

ಭಾರತ–ವಿಯೆಟ್ನಾಂ ಪಾಲುದಾರಿಕೆಗೆ ಒತ್ತು: ಎಸ್. ಜೈಶಂಕರ್

ಪಿಟಿಐ
Published 16 ಅಕ್ಟೋಬರ್ 2023, 15:35 IST
Last Updated 16 ಅಕ್ಟೋಬರ್ 2023, 15:35 IST
ಎಸ್. ಜೈಶಂಕರ್
ಎಸ್. ಜೈಶಂಕರ್   

ಹನೋಯಿ: ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರವು ಭಾರತ ಮತ್ತು ವಿಯೆಟ್ನಾಂ ದೇಶಗಳ  ಪಾಲುದಾರಿಕೆಯನ್ನು ಒಳಗೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಆಸಿಯಾನ್ ಮಹತ್ವ ಮತ್ತು ಕ್ವಾಡ್ ರಾಷ್ಟ್ರಗಳ ಕೂಟದ ಕೊಡುಗೆಗಳ ಬಗ್ಗೆ ಒತ್ತಿ ಹೇಳಿದರು.  

ನಾಲ್ಕು ದಿನಗಳ ವಿಯೆಟ್ನಾಂ ಪ್ರವಾಸಕ್ಕೆ ಭಾನುವಾರ ಇಲ್ಲಿಗೆ ಬಂದಿರುವ ಅವರು, ಹಿಂದೂ ಮಹಾಸಾಗರ–ಪೆಸಿಫಿಕ್ ವಿಚಾರದ ಕುರಿತು ವಿಯೆಟ್ನಾಂನ ರಾಜತಾಂತ್ರಿಕ ಅಕಾಡೆಮಿಯಲ್ಲಿ ಭಾಷಣ ಮಾಡಿದರು. ಇದಕ್ಕೂ ಮುನ್ನ ಜೈಶಂಕರ್ ಅವರು ವಿಯೆಟ್ನಾಂ ವಿದೇಶಾಂಗ ಸಚಿವ ಬುಯಿ ಥನ್ಹಾ ಸನ್‌ ಅವರನ್ನು ಭೇಟಿ ಮಾಡಿ, ವಾಣಿಜ್ಯ, ಇಂಧನ, ರಕ್ಷಣೆ ಮತ್ತು ಕಡಲ ತೀರದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.