ADVERTISEMENT

ಕೊರೊನಾ: ಮೊದಲು ಎಚ್ಚರಿಕೆ ನೀಡಿದ್ದ ವೈದ್ಯನೂ ಸೋಂಕಿಗೆ ಬಲಿ

ಪಿಟಿಐ
Published 6 ಫೆಬ್ರುವರಿ 2020, 17:04 IST
Last Updated 6 ಫೆಬ್ರುವರಿ 2020, 17:04 IST

ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಕುರಿತು ಮೊದಲಿಗೆ ಎಚ್ಚರಿಕೆ ನೀಡಿದ್ದ ವೈದ್ಯರಲ್ಲಿ ಒಬ್ಬರಾಗಿದ್ದ ಲಿ ವೆನ್‌ಲಿಯಾಂಗ್‌ ಅವರೇ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

34 ವರ್ಷದ ಲಿಯಾಂಗ್‌ ಅವರು ವುಹಾನ್‌ ನಗರದ ನಿವಾಸಿ ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ. ವುಹಾನ್‌ ನಗರದ ಸೀಫುಡ್ ಮಾರ್ಕೆಟ್‌ನ ಏಳು ಮಂದಿ ಸಾರ್ಸ್‌ ಮಾದರಿಯ ವೈರಸ್‌ ಪೀಡಿತರಾಗಿದ್ದಾರೆ ಎಂದು ವೈದ್ಯಕೀಯ ಕ್ಷೇತ್ರದ ಸಹೋದ್ಯೋಗಿಗಳಿಗೆ ವಿ–ಚಾಟ್‌ ಆ್ಯಪ್‌ ಮೂಲಕ ಸಂದೇಶ ರವಾನಿಸಿದ್ದರು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT