ADVERTISEMENT

ಚೀನಾ: ಕೋವಿಡ್‌ಗೆ ಮತ್ತೆ 7 ಬಲಿ

ಪಿಟಿಐ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಕೋವಿಡ್‌ಗೆ 7 ಜನರು ಬಲಿಯಾಗಿದ್ದು, ಈ ರೋಗಕ್ಕೆ ಸಾವನ್ನಪ್ಪಿದವರ ಸಂಖ್ಯೆ 3,176ಕ್ಕೆ ಏರಿದಂತಾಗಿದೆ.

ವುಹಾನ್‌ ನಗರವೂ ಸೇರಿದಂತೆ ದೇಶದಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದು, ಹೊಸದಾಗಿ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

‘ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ, ಕೋವಿಡ್‌ಅನ್ನು ನಿಯಂತ್ರಿಸುವುದೇ ಈಗ ದೇಶದ ಮುಂದಿರುವ ಕಠಿಣ ಸವಾಲು’ ಎಂದು ಎನ್‌ಎಚ್‌ಸಿ ವಕ್ತಾರ ಮಿ ಫೆಂಗ್‌ ತಿಳಿಸಿದ್ದಾರೆ.

ADVERTISEMENT

*ನಾರ್ವೆ, ಸುಡಾನ್‌ನಲ್ಲಿ ಕೋವಿಡ್‌ನಿಂದಾಗಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇದು ಎರಡೂ ಕಡೆಗಳಲ್ಲಿ ಮೊದಲ ಪ್ರಕರಣ.

* ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಕೂಡ ಕೋವಿಡ್‌–19 ಪೀಡಿತರಾಗಿದ್ದಾರೆ.

* ನೇಪಾಳದಲ್ಲಿ ಎವರೆಸ್ಟ್‌ ಸೇರಿದಂತೆ ವಿವಿಧ ಪರ್ವತಗಳ ಆರೋಹಣ, ಚಾರಣ ನಿಷೇಧ, ಪ್ರವಾಸಿಗರಿಗೆ ಬಂದಿಳಿದ ನಂತರ ನೀಡುತ್ತಿದ್ದ ವೀಸಾ ಸೌಲಭ್ಯ ಸ್ಥಗಿತ.

ಆಸ್ಟ್ರೇಲಿಯಾ: ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಗೃಹ ಸಚಿವ ಪೀಟರ್‌ ಡಟ್ಟನ್‌ ಅವರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು, ಬ್ರಿಸ್ಬೇನ್‌ನ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿದ ನಿಗಾ ವಿಭಾಗದಲ್ಲಿ ಚಿಕಿತ್ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.