ADVERTISEMENT

ಕೊರೊನಾ ವೈರಸ್‌: ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 722ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 5:41 IST
Last Updated 8 ಫೆಬ್ರುವರಿ 2020, 5:41 IST
   

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕಿನಿಂದಾಗಿಶುಕ್ರವಾರ ಒಂದೇ ದಿನ ಒಟ್ಟು 86 ಜನರು ಮೃತಪಟ್ಟಿದ್ದು, ಸದ್ಯಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 722ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆಹಾಂಗ್ ಕಾಂಗ್‌ನಲ್ಲಿ ದಶಕಗಳ ಹಿಂದೆ ಕಾಣಿಸಿಕೊಂಡಿದ್ದಸಾರ್ಸ್‌ ರೋಗದಲ್ಲಿ ಬಲಿಯಾದವರ ಸಂಖ್ಯೆಗಿಂತ ಹೆಚ್ಚು.

ಇತ್ತೀಚಿನೆ ವರದಿಗಳ ಪ್ರಕಾರದ ಚೀನಾದಾದ್ಯಂತ ಸದ್ಯ 34,500 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.ಗುರುವಾರದ ವರೆಗೆ ಒಟ್ಟು 636 ಜನರು ಕೊರೊನಾಗೆ ಬಲಿಯಾಗಿದ್ದರು.

2002–2003 ರಲ್ಲಿ ಹಾಂಗ್‌ ಕಾಂಗ್‌ ಮತ್ತು ಚೀನಾದಲ್ಲಿಕಾಣಿಸಿಕೊಂಡಿದ್ದ ಸಾರ್ಸ್‌ ರೋಗವು ಸುಮಾರು 650 ಜನರನ್ನ ಬಲಿ ಪಡೆದಿತ್ತು.

ADVERTISEMENT

ಕೊರೊನಾ ವೈರಸ್ ಸೋಂಕುಹರಡದಂತೆತಡೆಯಲು ಸುಮಾರು5.6 ಕೋಟಿಗೂ ಅಧಿಕ ಜನರನ್ನು ಮನೆಯಿಂದ ಹೊರಬರದಂತೆನಿರ್ಬಂಧ ವಿಧಿಸಲಾಗಿದೆ. ಆದಾಗ್ಯೂಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ವೈರಸ್‌ ನಿಯಂತ್ರಣಕ್ಕೆಅಧಿಕಾರಿಗಳು ಹರಸಾಹಸ ನಡೆಸುತ್ತಿದ್ದಾರೆ.

ಚೀನಾ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಸುಮಾರು 120ಕ್ಕೂ ಹೆಚ್ಚು ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.