ADVERTISEMENT

Covid-19 World Update: ಬ್ರೆಜಿಲ್‌ನಲ್ಲಿ 2ನೇ ದಿನವೂ ಕೋವಿಡ್‌ನಿಂದ 2000 ಸಾವು

ರಾಯಿಟರ್ಸ್
Published 12 ಮಾರ್ಚ್ 2021, 2:12 IST
Last Updated 12 ಮಾರ್ಚ್ 2021, 2:12 IST
ಸಾಂದರ್ಭಿಕ ಚಿತ್ರ (ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಎಎಫ್‌ಪಿ)   

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಕೋವಿಡ್‌ನಿಂದಾಗಿ 24 ಗಂಟೆ ಅವಧಿಯಲ್ಲಿ 2,233 ಸಾವು ಸಂಭವಿಸಿದೆ. 2 ಸಾವಿರಕ್ಕಿಂತಲೂ ಹೆಚ್ಚು ಸಾವು ಸಂಭವಿಸುತ್ತಿರುವುದು ಇದು ಎರಡನೇ ದಿನವಾಗಿದೆ. ಒಂದೇ ದಿನ 75,412 ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಬ್ರೆಜಿಲ್‌ನಲ್ಲಿ ಈವರೆಗೆ 1,12,77,717 ಮಂದಿಗೆ ಸೋಂಕು ತಗುಲಿದ್ದು 2,72,889 ಸೋಂಕಿತರು ಮೃತಪಟ್ಟಿದ್ದಾರೆ. ಅಮೆರಿಕ, ಭಾರತದ ಬಳಿಕ ಕೋವಿಡ್‌ನಿಂದ ಅತಿಹೆಚ್ಚು ತೊಂದರೆಗೊಳಗಾದ ರಾಷ್ಟ್ರವಾಗಿದೆ ಬ್ರೆಜಿಲ್.

ವರ್ಲ್ಡೊ ಮೀಟರ್ ಕೋವಿಡ್ ಟ್ರ್ಯಾಕರ್ ಮಾಹಿತಿ ಪ್ರಕಾರ ವಿಶ್ವದಾದ್ಯಂತ ಈವರೆಗೆ 11.91 ಮಂದಿ ಕೋವಿಡ್‌ ಪೀಡಿತರಾಗಿದ್ದು, 26.40 ಲಕ್ಷ ಸೋಂಕಿತರು ಸಾವಿಗೀಡಾಗಿದ್ದಾರೆ. 9.47 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 2.17 ಕೋಟಿ ಸಕ್ರಿಯ ಪ್ರಕರಣಗಳಿವೆ.

ಅಮೆರಿಕದಲ್ಲಿ ಈವರೆಗೆ 29.92 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದು, ಒಟ್ಟು 5.43 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಭಾರತದಲ್ಲಿ 1.13 ಕೋಟಿಗೂ ಹೆಚ್ಚು ಜನರು ಸೋಂಕಿತರಾಗಿದ್ದು, 1.58 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.