ADVERTISEMENT

Covid-19 World Update: 6.69 ಲಕ್ಷ ಹೊಸ ಪ್ರಕರಣ, ಹತ್ತು ಸಾವಿರ ಸೋಂಕಿತರು ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2021, 8:45 IST
Last Updated 4 ಮೇ 2021, 8:45 IST
   

ನ್ಯೂಯಾರ್ಕ್‌:ಪ್ರಪಂಚದಾದ್ಯಂತಸೋಮವಾರ ಒಂದೇ ದಿನ ಬರೋಬ್ಬರಿ 6,69,689 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 10,478 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15.4 ಕೋಟಿಗೆ(15,41,75,226) ಏರಿಕೆಯಾಗಿದ್ದು, ಸಾವಿನ ಸಂಖ್ಯೆ 32.26 ಲಕ್ಷಕ್ಕೆ (3,226,743) ತಲುಪಿದೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾದರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿಕಳೆದ 24ಗಂಟೆಗಳಲ್ಲಿ ಬರೋಬ್ಬರಿ39,767ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 445 ಮಂದಿಮೃತಪಟ್ಟಿದ್ದಾರೆ. ಇದರೊಂದಿಗೆ ಈ ದೇಶದಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 3.32 ಕೋಟಿಗೆ (3,32,30,561) ಏರಿಕೆಯಾಗಿದೆ. ಸಾವಿನ ಸಂಖ್ಯೆ5.91 ಲಕ್ಷಕ್ಕೆ (5,91,514) ತಲುಪಿದೆ.

ಭಾರತದಲ್ಲಿಹೊಸದಾಗಿ 3.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 2 ಕೋಟಿಯ ಸಮೀಪಕ್ಕೆಸಾಗಿದೆ.2.22ಲಕ್ಷ (2,22,408) ಸೋಂಕಿತರು ಮೃತಪಟ್ಟಿದ್ದಾರೆ.

ADVERTISEMENT

ಸೋಮವಾರ ಬ್ರೆಜಿಲ್‌ ಹಾಗೂ ಟರ್ಕಿಯಲ್ಲಿ ಕ್ರಮವಾಗಿ 36,524 ಹಾಗೂ 24,733 ಹೊಸ ಪ್ರಕರಣಗಳು ವರದಿಯಾಗಿವೆ.ಈ ಎರಡೂ ದೇಶಗಳಲ್ಲಿ ಈವರೆಗೆ ಕ್ರಮವಾಗಿ 4,08,829 ಮತ್ತು 41,191 ಸಾವಿನ ಪ್ರಕರಣಗಳು ವರದಿಯಾಗಿವೆ.ಉಳಿದಂತೆ, ಮೆಕ್ಸಿಕೋ (2.17 ಲಕ್ಷ), ಇಂಗ್ಲೆಂಡ್‌ (1.27 ಲಕ್ಷ), ಇಟಲಿ (1.21 ಲಕ್ಷ), ರಷ್ಯಾ (1.11ಲಕ್ಷ)ಮತ್ತು ಫ್ರಾನ್ಸ್‌ನಲ್ಲಿ (1.05 ಲಕ್ಷ)ಒಂದು ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.

ಅಮೆರಿಕ-ಭಾರತಲ್ಲೇ ಹೆಚ್ಚುಸಕ್ರಿಯ ಪ್ರಕರಣಗಳು
ವರ್ಲ್ಡೋಮೀಟರ್‌ ಮಾಹಿತಿ ಪ್ರಕಾರ ಜಗತ್ತಿನದಾದ್ಯಂತ ವರದಿಯಾಗಿರುವ ಒಟ್ಟು 15.4 ಕೋಟಿ ಪ್ರಕರಣಗಳ ಪೈಕಿ, ಈವರೆಗೆ ಒಟ್ಟು 13.2 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ. 32 ಲಕ್ಷದ 26 ಸಾವಿರ ಮಂದಿ ಮೃತಪಟ್ಟಿದ್ದು, ಇನ್ನೂ 1.86 ಕೋಟಿಗೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ.

3.32 ಕೋಟಿ ಪ್ರಕರಣಗಳು ವರದಿಯಾಗಿರುವಅಮೆರಿದಲ್ಲಿ 2 ಕೋಟಿ 59 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ, ಇನ್ನೂ 67 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. 1.99 ಕೋಟಿ ಕೋಟಿ ಸೋಂಕು ಪ್ರಕರಣಗಳನ್ನು ಹೊಂದಿರುವ ಭಾರತದಲ್ಲಿ ಇನ್ನೂ34.4 ಲಕ್ಷ ಸಕ್ರಿಯ ಪ್ರಕಣಗಳಿವೆ. ಹೀಗಾಗಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಅರ್ಧದಷ್ಟುಈ ಎರಡೇ ದೇಶಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.