ADVERTISEMENT

Covid World Update| ಕೋವಿಡ್‌ ಗೆದ್ದ ಪಾಕ್‌ನ 103ರ ವೃದ್ಧ ವಿಶ್ವದ ಅತಿ ಹಿರಿಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 17:13 IST
Last Updated 24 ಜುಲೈ 2020, 17:13 IST
103 ವರ್ಷದ ಅಜೀಜ್‌ ಅಬ್ದುಲ್‌ ಅಲಿಮ್‌ ಅವರೊಂದಿಗೆ ಆರೋಗ್ಯ ಕಾರ್ಯಕರ್ತರು
103 ವರ್ಷದ ಅಜೀಜ್‌ ಅಬ್ದುಲ್‌ ಅಲಿಮ್‌ ಅವರೊಂದಿಗೆ ಆರೋಗ್ಯ ಕಾರ್ಯಕರ್ತರು    

ವಾಷಿಂಗ್ಟನ್‌: ಜಗತ್ತಿನ ಸೋಂಕಿತರ ಸಂಖ್ಯೆ ಶುಕ್ರವಾರ ಒಂದೂವರೆ ಕೋಟಿ (1,55,66,087) ದಾಟಿದೆ.ಇದೇ ವೇಳೆ 6,34,594 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದೆ. 40,57,100 ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿವೆ. ಬ್ರೆಜಿಲ್‌ನಲ್ಲಿ 22,87,475 ಪ್ರಕರಣಗಳಿದ್ದರೆ, ಭಾರತದಲ್ಲಿ 12,88,108 ಸೋಂಕಿತರಿದ್ದಾರೆ.

ಪಾಕಿಸ್ತಾನದಲ್ಲಿ 103ರ ವ್ಯಕ್ತಿ ಗುಣಮುಖ

ADVERTISEMENT

ಪಾಕಿಸ್ತಾನದ 103 ವರ್ಷದ ವೃದ್ಧರೊಬ್ಬರು ಕೊರೊನಾ ವೈರಸ್‌ ಸೋಂಕಿನಿಂದ ಮುಕ್ತರಾಗಿದ್ದಾರೆ. ಈ ಮೂಲಕ ಅವರು ಸೋಂಕಿನಿಂದ ಗುಣಮುಖರಾದ ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ದೇಶದ ಕಳಪೆ ಆರೋಗ್ಯ ವ್ಯವಸ್ಥೆಯ ಮಧ್ಯೆಯೂ ಅವರು ಕಾಯಿಲೆಯಿಂದ ಗುಣಮುಖರಾಗಿರುವುದು ಪವಾಡವೇ ಸರಿ ಎಂದು ಸಂಬಂಧಿಗಳು, ವೈದ್ಯರು ಹೇಳಿದ್ದಾರೆ.

ಉತ್ತರ ಪಾಕಿಸ್ತಾನದ ಚಿತ್ರಾಲ್‌ ಜಿಲ್ಲೆಯ ಅಜೀಜ್‌ ಅಬ್ದುಲ್‌ ಅಲಿಮ್‌ ಕೋವಿಡ್‌ ಗೆದ್ದ ಹಿರಿಯ.

ಪಾಕಿಸ್ತಾನದಲ್ಲಿ ಶುಕ್ರವಾರ1,209 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದ ಸೋಂಕಿತರ ಸಂಖ್ಯೆ 270,400ಕ್ಕೆ ಏರಿದೆ.

ಯೂರೋಪ್‌ನಲ್ಲಿ ಮಾಸ್ಕ್‌ ಕಡ್ಡಾಯ

ಇಂಗ್ಲೆಂಡ್‌ನಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶುಕ್ರವಾರದಿಂದ ಆದೇಶ ಜಾರಿಗೆ ಬಂದಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.